ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಿದಾಗ ಮಾತ್ರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಲು ಸಾಧ್ಯ ಎಂದು ಕೆ.ಆರ್.ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಸಾಲಿಗ್ರಾಮ ತಾಲೂಕಿನ ದಿಡ್ಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ಹೊಸೂರು ಎ.ಕುಚೇಲ್ ಅವರಿಗೆ ಏರ್ಪಡಿಸಿದ್ದ ಸನ್ಮಾನ ಮತ್ತು ಬೀಳ್ಗೊಡಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರಿ ಸೇವೆಯಲ್ಲಿ 60 ವರ್ಷದ ನಂತರ ನಿವೃತ್ತಿ ಕಡ್ಡಾಯ ವಾಗಿದ್ದು ಈ ಅವಧಿಯಲ್ಲಿ ಶಿಕ್ಷಕರು ಸಲ್ಲಿಸುವ ಶಿಕ್ಷಣದ ಸೇವೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಹೃದಯದಲ್ಲಿ ಸ್ಥಾನ ಪಡೆದು ಕೊಳ್ಳಲು ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ಶಿಕ್ಷಕರು ಕಾರ್ಯನಿರ್ವಹಿಸಿ ಎಂದ ಅವರು ಕುಚೇಲ್ ಅವರು ವೃತ್ತಿಯಲ್ಲಿ ಗೌರವ ಎತ್ತಿ ಹಿಡಿದು ಕೆಲಸ ನಿರ್ವಹಿಸಿ ನಿವೃತ್ತಿ ಅಗುತ್ತಿದ್ದು ಇವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.
ತಾಲೂಕು ಅಕ್ಷರ ದಾಸೋಹದ ತಾಲೂಕು ಸಹಾಯಕ ನಿರ್ದೇಶಕ ಪ್ರದೀಪ್ ಚುಂಚನಕಟ್ಟೆ ಮಾತನಾಡಿ ದಿಡ್ಡಹಳ್ಳಿ ಗ್ರಾಮದ ಶಾಲೆಯ ಅಭಿವೃದ್ದಿಗೆ ಮುನ್ನಡಿ ಬರೆದು ಸುಮಾರು 35 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಧಿಗಳಿಗೆ ಶಿಕ್ಷಣ ಅನ್ನ ಬಡಿಸಿ ಯಾವುದೇ ಕಪ್ಪು ಚುಕ್ಕಿ ಇಲ್ಲದೇ ಸೇವೆಯಿಂದ ನಿವೃತ್ತಿಯಾದ ಎ.ಕುಚೇಲ್ ಅವರ ಸೇವೆ ಯುವ ಶಿಕ್ಷಕರಿಗೆ ಮಾದರಿಯಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎ.ಕುಚೇಲ್ ಮಾತನಾಡಿ ಶಿಕ್ಷಣ ಕ್ಷೇತ್ರವು ಬಹಳ ಪವಿತ್ರವಾಗಿದ್ದು ಇಲ್ಲಿ ಎಲ್ಲರು ಕೆಲಸ ಮಾಡಲು ಎಲ್ಲರಿಗೂ ಅವಕಾಶ ಸಿಗಲ್ಲ ಸಿಕ್ಕ 35 ವರ್ಷಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಟ್ಟ ನನಗೆ ವಿದ್ಯಾರ್ಥಿಗಳಿಂದ ಸಿಗುವ ಗೌರವವೇ ನನಗೆ ದೊಡ್ಡ ಸನ್ಮಾನವಾಗಿದೆ ನನ್ನ ಯಶಸ್ವಿಗೆ ಸಹಕಾರ ಕೊಟ್ಟ ಶಿಕ್ಷಣ ಇಲಾಖೆ ಮತ್ತು ಕರ್ತವ್ಯ ನಿರ್ವಹಿಸಿದ ಶಾಲೆಗಳ ಪೋಷಕ ವರ್ಗದವರಿಗೆ ಕೃತಜ್ಞತೆಯನ್ನು ಸಲ್ಲಿಸುವೆ ಎಂದರು.
ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಎ.ಕುಚೇಲ್ ,ಪತ್ನಿ ಕೋಮಲ,ಪುತ್ರ ವಿಕ್ರಮ್ ಗೌಡ ಅವರನ್ನು ಕುಚೇಲ್ ಅಭಿಮಾನಿ ಬಳಗದ ಡೈರಿ ಮಾದು,ಎಚ್.ಕೆ.ಕೀರ್ತಿ, ಸಯದ್ ಸಲೀಂ ಮರೀಗೌಡ, ದೊಡ್ಡಕೊಪ್ಪಲು ನವೀನ,ಮಹೇಶ್, ಆನಂತಕೋಟೆ, ಹಳಿಯೂರು ಗೋಫಿ,ಧರ್ಮಸೇಟು ಮತ್ತಿತರರು ಅಭಿನಂದಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ.ಅರುಣ್ ಕುಮಾರ್, ಎನ್.ಪಿ.ಎಸ್ ನೌಕರರ ಸಂಘದ ಅಧ್ಯಕ್ಷ ಹನಸೋಗೆ ಶಶಿಕಿರಣ್, ಒಕ್ಕಲಿಗ ನೌಕರರ ಸಂಘದ ಖಜಾಂಚಿ ಆನಂದಕಿತ್ತೂರ್, ಹಳಿಯೂರು ಗ್ರಾ.ಪಂ.ಅಧ್ಯಕ್ಷೆ ರೇಖಾಜಗದೀಶ್, ಮಾಜಿ ಉಪಾಧ್ಯಕ್ಷ ಮಂಜುನಾಥ್
ಸಹಕಾರ ಸಂಘದ ಉಪಾಧ್ಯಕ್ಷ ಎಚ್.ಬಿ.ನವೀನ, ಎಚ್.ಎನ್.ರಮೇಶ್, ಬಿ.ಆರ್.ಸಿ.ವೆಂಕಟೇಶ್, ಇಸಿಓಗಳಾದ ಎಸ್.ಬಿ.ಜಗದೀಶ್, ಭರತೇಶ್,ದಾಸಪ್ಪ ,ಸಿ.ಆರ್.ಪಿ ಪ್ರಸಾದ್ ಸಾಲೇಕೊಪ್ಪಲು, ಬಿಇಓ ಕಚೇರಿ ಸಹಾಯಕ ಹೆಬ್ಬಾಳು ಧನಂಜಯ, ಶಾಲೆಯ ಶಿಕ್ಷಕಿಯರಾದ ಮಂಜುಳಾರಾಮಚಂದ್ರ, ಗೀತಾಮಣಿ, ವೀಣಾ, ಸವಿತಾ,ಕಲ್ಪನಾ
ಮಿರ್ಲೆ ಧನಂಜಯ, ಚಂದ್ರಶೇಖರ್, ಹೊಂಬೇಗೌಡ, ಹರೀಶ್, ಸೇರಿದಂತೆ ಮತ್ತಿತತರು ಹಾಜರಿದ್ದರು.