Saturday, February 14, 2026
Google search engine

Homeಅಪರಾಧಶುಲ್ಕ ಕಟ್ಟದ ಲಾರಿ ತಡೆಯಲು ಹೋಗಿ ಪ್ರಾಣ ಕಳೆದುಕೊಂಡ ಟೋಲ್ ಆಪರೇಟರ್

ಶುಲ್ಕ ಕಟ್ಟದ ಲಾರಿ ತಡೆಯಲು ಹೋಗಿ ಪ್ರಾಣ ಕಳೆದುಕೊಂಡ ಟೋಲ್ ಆಪರೇಟರ್

ಬೆಂಗಳೂರು:  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಅರಿಶಿನಕುಂಟೆಯಲ್ಲಿರುವ ನವಯುಗ ಟೋಲ್‌ ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಕ್ಯಾಂಟರ್‌ ತಡೆಯಲು ಹೋಗಿ ಟೋಲ್ ಆಪರೇಟರ್ ಪ್ರಾಣ ಕಳೆದುಕೊಂಡಿದ್ದಾನೆ.

ನಾಗರಾಜ್(25) ಮೃತ ಯುವಕ.

ಟೋಲ್‌‌ ಆಪರೇಟರ್ ಆಗಿದ್ದ ನಾಗರಾಜ್, ನಿನ್ನೆ(ಮೇ.31) ರಾತ್ರಿ ಎಂದಿನಂತೆ ರಾತ್ರಿ ಪಾಳಿ ಕೆಲಸ ಮಾಡುತ್ತಿದ್ದ. ಅದರಂತೆ  ಟೋಲ್‌ನಲ್ಲಿ ಶುಲ್ಕ ಕಟ್ಟದೆ ಹೋಗುತ್ತಿದ್ದ ಲಾರಿಯನ್ನ ತಡೆಯಲು ಮುಂದಾಗಿದ್ದ. ಈ ವೇಳೆ ಹಿಂಬದಿಯಿಂದ ಬಂದ ಕ್ಯಾಂಟರ್ ಚಾಲಕ, ಅಜಾಗರೂಕತೆಯಿಂದ ಲಾರಿಯನ್ನು ನಾಗರಾಜ್​ ಮೇಲೆ ಹತ್ತಿಸಿ ಪರಾರಿಯಾಗಿದ್ದಾನೆ. ನಾಗರಾಜು ರಸ್ತೆಯಲ್ಲಿಯೇ ಸಾವು- ಬದುಕಿನ ನಡುವೆ ಹೋರಾಟ ನಡೆಸಿ ಬಳಿಕ ಸಾವನ್ನಪ್ಪಿದ್ದಾನೆ.

 ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಸಂಚಾರಿ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು, ಕ್ಯಾಂಟರ್ ವಾಹನ ಚಾಲಕನನ್ನ ಹುಬ್ಬಳಿಯಲ್ಲಿ ವಶಕ್ಕೆ‌ ಪಡೆದು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular