ಪ್ಯಾರಿಸ್: ಮುಂಬೈ ವಿಸ್ತಾರಾ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ. ೩೦೬ ಪ್ರಯಾಣಿಕರು ಮತ್ತು ಸಿಬ್ಬಂದಿಗಳನ್ನು ಹೊತ್ತು ಮುಂಬೈಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ ಹಾಕಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ನಗರದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಪ್ಯಾರಿಸ್‌ನ ಚಾರ್ಲ್ಸ್ ಡಿ ಗಾಲ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಯುಕೆ ೦೨೪ ವಿಮಾನವು ಇಂದು ಭಾನುವಾರ ಬೆಳಿಗ್ಗೆ ೧೦.೧೯ ಕ್ಕೆ ಮುಂಬೈಗೆ ಬಂದಿಳಿದಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ ೧೦.೦೮ಕ್ಕೆ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ೩೦೬ ಜನರಲ್ಲಿ ೨೯೪ ಪ್ರಯಾಣಿಕರು ಮತ್ತು ೧೨ ಸಿಬ್ಬಂದಿಗಳಾಗಿದ್ದಾರೆ. ೨೦೨೪ರ ಜೂನ್ ೨ರಂದು ಪ್ಯಾರಿಸ್‌ನಿಂದ ಮುಂಬೈಗೆ ಕಾರ್ಯಾಚರಣೆ ನಡೆಸುತ್ತಿರುವ ಏರ್‌ಲೈನ್‌ನ ಯುಕೆ ೦೨೪ ವಿಮಾನದಲ್ಲಿ ನಮ್ಮ ಸಿಬ್ಬಂದಿಗೆ ಬಾಂಬ್ ಬೆದರಿಕೆಯ ಪತ್ರ ಸಿಕ್ಕಿದೆ ಎಂದು ವಿಸ್ತಾರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏರ್‌ಲೈನ್ ವಕ್ತಾರರು ಮಾಹಿತಿ ಪಡೆದ ನಂತರ, ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ತಿಳಿಸಿದ್ದಾರೆ. ವಿಸ್ತಾರಾ ಎಲ್ಲಾ ಕಡ್ಡಾಯ ತಪಾಸಣೆಗಳಿಗೆ ಭದ್ರತಾ ಏಜೆನ್ಸಿಗಳೊಂದಿಗೆ ಸಂಪೂರ್ಣವಾಗಿ ಸಹಕರಿಸುತ್ತಿದೆ ಎಂದು ಹೇಳಿದರು.