ಮಂಡ್ಯ: ನಾಳಿನ ಫಲಿತಾಂಶದಲ್ಲಿ ನನ್ನ ಗೆಲುವು ನಿಶ್ಚಿತ. ನೂರಕ್ಕೆ ನೂರರಷ್ಟು ನಾನೇ ಗೆಲ್ತೇನೆ. ಮರಿತಿಬ್ಬೇಗೌಡ ಸಹ ಗೆದ್ದೆ ಗೆಲ್ತಾರೆ ಎಂದು ಮದ್ದೂರಿನ ಲೋಕಸಭಾ ಕೈ ಅಭ್ಯರ್ಥಿ ಸ್ಟಾರ್ ಚಂದ್ರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಐದು ಗ್ಯಾರಂಟಿ ಕೊಟ್ಟಿದ್ದೇವೆ ಅನುಷ್ಠಾನಕ್ಕೆ ತಂದು ಜನರಿಗೆ ತಲುಪಿಸುತ್ತೇವೆ. ಮಂಡ್ಯ ಅಭಿವೃದ್ಧಿ ಬಗ್ಗೆ ಅರಿವಿದೆ ಅಭಿವೃದ್ಧಿಗೆ ಕ್ರಮ ವಹಿಸ್ತೇವೆ. ಜಿಲ್ಲಾ ನಾಯಕರು ಸೇರಿ ಜಿಲ್ಲೆ ಸಮಗ್ರ ಅಭಿವೃದ್ಧಿ. ಮಂಡ್ಯ ಟೌನ್ ಅನ್ನ ದೊಡ್ಡ ಸಿಟಿ ಮಾಡುವ ಚಿಂತನೆ ಇದೆ ಮಾಡ್ತೇವೆ. ಎಲ್ಲಾ ಕೆಲಸ ಮಾಡಲು ಪ್ರಯತ್ನ ಮಾಡ್ತೇವೆ ಎಂದು ಹೇಳಿದರು.
ಕಾವೇರಿ ಬಗ್ಗೆ ಕಾನೂನು ಪ್ರಕಾರ ಹೋರಾಟ ಇರುತ್ತೆ. ನಾವು ಗೆದ್ದೆ ಗೆಲ್ತೇವೆ ಒಂದು ಸಾವಿರದಿಂದ ಗೆದ್ದರು ಗೆಲುವು ಒಂದು ಓಟ್ ನಿಂದ ಗೆದ್ದರು ಗೆಲುವು. ನನ್ನ ಚುನಾವಣೆಯಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ನಮ್ಮ ಮತದಾರರು ನನಗೆ ಸಾಕಷ್ಟು ಸಪೋರ್ಟ್ ಮಾಡಿದ್ದಾರೆ ಎಂದರು.