ಮದ್ದೂರು : ಸ್ವಾತಂತ್ರ್ಯ ಪೂರ್ವದಿಂದಲೂ ಕಾರ್ಯನಿರ್ವಹಿಸುತ್ತಿರುವ ಪಿಕಾರ್ಡ್ ಬ್ಯಾಂಕ್ ರಾಜ್ಯ ಸರ್ಕಾರ ಘೋಷಿಸಿದ್ದ ಬಡ್ಡಿ ಮನ್ನಾ ಸೌಲಭ್ಯದಡಿ ಶೇಕಡ 70 ರಷ್ಟು ಪ್ರಗತಿ ಸಾಧಿಸಿದೆ ಇದರಿಂದಾಗಿ ಪಿಕಾರ್ಡ್ ಬ್ಯಾಂಕ್ ಎ ದರ್ಜೆಗೆರಿದೆ ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪೇಗೌಡ ತಿಳಿಸಿದರು.
ಬ್ಯಾಂಕ್ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಬರಗಾಲದ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಾಜ್ಯ ಸರ್ಕಾರ ಘೋಷಿಸಿದ ಬಡ್ಡಿ ಮನ್ನಾ ಸೌಲಭ್ಯದಡಿ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯ ದ ಕುರಿತು ಮನದಟ್ಟು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇಂಥ ಪ್ರಗತಿ ಸಾಧಿಸಲು ಸಾಧ್ಯವಾಯಿತು ಎರಡು ಕೂಟಿ ನಲವತ್ತೇಳು ಲಕ್ಷ ಹೊನ್ನೂಂದು ಸಾವಿರ ರೂ ಸಾಲ ವಸೂಲಿಸಲಾಗಿದೆ ಎಂದು ತಿಳಿಸಿದರು.
ಸಿ ದರ್ಜೆಯಲ್ಲಿದ್ದ ಪಿಕಾರ್ಡ್ ಬ್ಯಾಂಕ್ ಷೇರುದಾರರ ಹಾಗೂ ಸಾಲಗಾರ ಸದಸ್ಯರ ಸಹಕಾರದಿಂದ ಎ ದರ್ಜೆ ಗೆ ಏರಿದ್ದು, ಇದರಿಂದ ಪ್ರಸ್ತುತ ಸಾಲಿನಲ್ಲಿ ಒಂದು ಕೋಟಿಗೂ ಹೆಚ್ಚು ಕೃಷಿ ಸಾಲ ಮಂಜೂರಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದಾಗ ಸಿ ಧರ್ಜಿಯಲ್ಲಿದ್ದ ಬ್ಯಾಂಕ್ ಇಂದು ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಶ್ರಮದ ಫಲವಾಗಿ ಎ ದರ್ಜೆಗೇರಿದ್ದು ಈ ಸಂದರ್ಭದಲ್ಲಿ ತಾಲೂಕಿನ ಸಮಸ್ತ ಜನರಿಗೆ ಷೆರುದಾರರಿಗೂ ಸಾಲಗಾರ ಸದಸ್ಯರಿಗೂ ಜಿಲ್ಲಾ ಹಾಗೂ ರಾಜ್ಯಮಟ್ಟದ ಬ್ಯಾಂಕ್ ನ ಅಧಿಕಾರಿಗಳಿಗೂ ಧನ್ಯವಾದಗಳು ತಿಳಿಸಲು ಬಯಸುತ್ತೇನೆ ಎಂದರು.
ಪಿಕಾರ್ಡ್ ಬ್ಯಾಂಕ್ ನ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸಹಕಾರ ನೀಡಿದ ಮಾಜಿ ಶಾಸಕರಾದ ಡಿ ಸಿ ತಮ್ಮಣ್ಣರವರಿಗೂ ಸಾಧನೆಗೆ ನೆರವಾದ ಮದ್ದೂರು ಕ್ಷೇತ್ರದ ಶಾಸಕರಾದ ಉದಯ ಗೌಡರವರಿಗು ನಮ್ಮ ಬ್ಯಾಂಕಿನ ರಾಜ್ಯಮಟ್ಟದಲ್ಲಿ ಪ್ರತಿನಿಧಿಸುತ್ತಿರುವಾ ತಿಮ್ಮರಾಯಿಗೌಡ ಆವರಿಗೂ ಅಭಿ ವಂದನೆಗಳನ್ನು ತಿಳಿಸಲು ಬಯಸುತ್ತೇನೆ ಎಂದರು.