Sunday, April 20, 2025
Google search engine

Homeರಾಜ್ಯಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜಿನಲ್ಲಿ ಪೇರೆಂಟ್ ಓರಿಯೆಂಟೇಷನ್ ಹಾಗೂ ಹಾಫೀಜ್ ವಿದ್ಯಾರ್ಥಿಗಳಿಗೆ ಪ್ರತಿಭಾ...

ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜಿನಲ್ಲಿ ಪೇರೆಂಟ್ ಓರಿಯೆಂಟೇಷನ್ ಹಾಗೂ ಹಾಫೀಜ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರಿನ ಬರಕಾ ಇಂಟರ್ ನ್ಯಾಷನಲ್ ಸ್ಕೂಲ್ & ಕಾಲೇಜು ಅಡ್ಯಾರುವಿನಲ್ಲಿ ಪೇರೆಂಟ್ ಓರಿಯೆಂಟೇಷನ್ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.

2024-25ನೇ ಶೈಕ್ಷಣಿಕ ಸಾಲಿನ ರೂಪುರೇಷೆ, ಕಾರ್ಯವಿಧಾನ, ನಿಯಮ ನಿಬಂಧನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೆತ್ತವರಿಗೆ ನೀಡಲಾಯಿತು.  ಸಹ ಪ್ರಾಂಶುಪಾಲರಾದ ಸೌಸ್ರೀನ್, ಅಕಾಡೆಮಿಕ್ ಸಂಯೋಜಕರಾದ ಝಾಹಿದ, ಸಲ್ಮಾ, ಸಂಶಾದ್ ಹಾಗೂ ಬಿಲ್ಕೀಸ್ ಇವರು ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.  ಇಸ್ಲಾಮಿಕ್ ಪ್ರಾಂಶುಪಾಲರಾದ ಹನೀಫ್ ಅವರು ಇಸ್ಲಾಮಿಕ್ ಪಠ್ಯಕ್ರಮದ ಮಾಹಿತಿ ನೀಡಿದರು. ಸಮಾರಂಭದಲ್ಲಿ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅದೇ ರೀತಿ 2023-24ನೇ ಸಾಲಿನಲ್ಲಿ ಕುರ್ಆನ್ ಕಂಠಪಾಠ ಮಾಡಿದ ಅಬ್ರಾರ್ ಶೇಕ್ ಅನ್ಸಾರ್ ಹಾಗೂ ಮಹಮ್ಮದ್ ಹಸನ್ ಸಾಬಿಕ್ ಇವರನ್ನು ಹಾಗೂ ವಿದ್ಯಾರ್ಥಿಗಳ ಪೋಷಕರನ್ನು ಹಾಗೂ ಈ ವಿದ್ಯಾರ್ಥಿಗಳಿಗೆ ಹಿಫ್ಜ್ ಕಲಿಸಿದ ಉಸ್ತಾದರುಗಳನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ KPCC ಉಪಾಧ್ಯಕ್ಷರಾದ ಎಂ. ಎ. ಗಫೂರ್, ಬರಕಾ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಅಶ್ರಫ್ ಬಜ್ಪೆ ಹಾಗೂ ಎಂ.ಡಿ. ನರ್ಗಿಸ್ ಅಶ್ರಫ್, ಪಿ.ಯು. ವಿಭಾಗದ ಪ್ರಾಂಶುಪಾಲರಾದ ಆಶುರ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಲ್ಮಾ ಅವರು ನಿರೂಪಿಸಿದರು.

RELATED ARTICLES
- Advertisment -
Google search engine

Most Popular