Sunday, April 20, 2025
Google search engine

Homeರಾಜ್ಯಮೈಸೂರು: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದ ವೃದ್ಧೆ ಸಾವು, 50 ಕ್ಕೂ ಹೆಚ್ಚು ಜನರು...

ಮೈಸೂರು: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದ ವೃದ್ಧೆ ಸಾವು, 50 ಕ್ಕೂ ಹೆಚ್ಚು ಜನರು ಅಸ್ವಸ್ಥ

ಮೈಸೂರು: ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಊಟ ಸೇವಿಸಿದ್ದ ವೃದ್ಧೆ ಸಾವನ್ನಪ್ಪಿದ್ದು, ಗೃಹ ಪ್ರವೇಶದಲ್ಲಿ ಊಟ ಮಾಡದ ಒಂದೇ ಗ್ರಾಮದ 50ಕ್ಕೂ ಹೆಚ್ಚು ಜನರಲ್ಲಿ ವಾಂತಿ ಭೇದಿ ಉಂಟಾಗಿರುವಂತಹ ಘಟನೆ ಮೈಸೂರು ತಾಲೂಕಿನ ಮಾರ್ಬಳ್ಳಿ ಗ್ರಾಮದಲ್ಲಿ ನಡೆದಿದೆ.

ಶಿವಮ್ಮ(65) ಮೃತ ವೃದ್ಧೆ. ಮೇ 31ರಂದು ಮಾರ್ಬಳ್ಳಿಯಲ್ಲಿ ಗೃಹಪ್ರವೇಶ ಕಾರ್ಯಕ್ರಮ ಇತ್ತು. ಈ ವೇಳೆ ಸುಮಾರು 300ಕ್ಕೂ ಅಧಿಕ ಜನರು ಊಟ ಮಾಡಿದ್ದು ಆ ಪೈಕಿ 30ಕ್ಕೂ ಅಧಿಕ ಜನರು ಮೈಸೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಕೆ.ಸಾಲುಂಡಿ, ತಗಡೂರು ಬಳಿಕ ಮಾರ್ಬಳ್ಳಿ ಬಿಟ್ಟು ಬೇರೆ ಗ್ರಾಮಗಳಿಂದಲೂ ಬಂದು ಊಟ ಮಾಡಿದ್ದರು. ಊಟ ಸೇವಿಸಿದ್ದ ಬೇರೆ ಗ್ರಾಮಗಳ ಜನರಲ್ಲಿ ಯಾರಿಗೂ ಸಮಸ್ಯೆ ಆಗಿಲ್ಲ. ಮಾರ್ಬಳ್ಳಿ ಗ್ರಾಮದಲ್ಲಿ ಊಟ ಮಾಡದವರಿಗೂ ವಾಂತಿ ಭೇದಿ ಆಗಿದೆ. ಇಷ್ಟೆಲ್ಲಾ ಪ್ರಕರಣ ನಡೆದರೂ, ಈ ಹಿಂದೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನ ನೀಡಿದ್ದರೂ ಆರೋಗ್ಯ ಇಲಾಖೆ ಮಾತ್ರ ಎಚ್ಚೆತ್ತುಕೊಂಡಿಲ್ಲ.

ಇತ್ತೀಚೆಗೆ ಮೈಸೂರು ತಾಲೂಕಿನ ಕೆ.ಸಾಲುಂಡಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, 35ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದರು. ಬಳಿಕ ಸ್ವತಃ ಸಿದ್ದರಾಮಯ್ಯ ಅವರೇ ಗ್ರಾಮಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಪಟ್ಟಣ ಪಂಚಾಯತ್​ನ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿದ್ದರು.

RELATED ARTICLES
- Advertisment -
Google search engine

Most Popular