ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೈತ್ರಿ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಮುನ್ನಡೆ ಸಾಧಿಸಿದ್ದಾರೆ.
ಕುಮಾರಸ್ವಾಮಿ ಅವರು 80339 ಮತಗಳಿಂದ ಮುನ್ನಡೆ ಸಾಧಿಸಿದ್ದು, ಸ್ಟಾರ್ ಚಂದ್ರು 119256 ಮತಗಳಿಸಿದ್ದಾರೆ.
ಮಂಡ್ಯ ವಿವಿ ಆವರಣದಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಮೊದಲಿಗೆ ಅಂಚೆ ಮತಗಳು, ETPBS ಮತಗಳನ್ನು ಎಣಿಕೆ ಮಾಡಲಾಗುತ್ತಿದೆ.

ಡಿಸಿ ಡಾ.ಕುಮಾರ, ಎಸ್ಪಿ ಎನ್.ಯತೀಶ್ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ಓಪನ್ ಮಾಡಲಾಗಿದ್ದು,
ಸಿಬ್ಬಂದಿಗಳು ಹಾಗೂ ಏಜೆಂಟರುಗಳನ್ನ ತಪಾಸಣೆ ನಡೆಸಿ ಪೊಲೀಸರು ಒಳ ಬಿಟ್ಟಿದ್ದಾರೆ. ಸುಮಾರು 8 ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದೆ
ಮತ ಎಣಿಕೆ ಕೇಂದ್ರದ ಬಳಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಡಿಸಿ ಡಾ.ಕುಮಾರ, ಎಸ್ಪಿ ಎನ್.ಯತೀಶ್, ಸಿಇಓ ಉಪಸ್ಥಿತರಿದ್ದಾರೆ.
ಕಾರ್ಯಕರ್ತರ ಸಂಭ್ರಮಾಚರಣೆ
ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೆಚ್ಚು ಅಂತರ ಹಿನ್ನಲೆ ಮತ ಎಣಿಕೆ ಕೇಂದ್ರದ ಬಳಿ ಕಾರ್ಯಕರ್ತರು ಕುಮಾರಸ್ವಾಮಿಗೆ ಜೈಕಾರ ಕೂಗಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಗೌಡರ ಗೌಡ ದೇವೇಗೌಡ ಎಂದು ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ್ದಾರೆ.
ಭೇಟಿ ನೀಡಿದ ಸ್ಟಾರ್ ಚಂದ್ರು
ಎಣಿಕೆ ಆರಂಭಕ್ಕೂ ಮೊದಲು ಎಣಿಕೆ ಕೇಂದ್ರಕ್ಕೆ ಕೈ ಅಭ್ಯರ್ಥಿ ಭೇಟಿ ನೀಡಿದ ಸ್ಟಾರ್ ಚಂದ್ರು ಭೇಟಿ ನೀಡಿದ್ದರು.