ಮುಂಬೈ: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಇಂದು ಮಂಗಳವಾರ ಆರಂಭಿಕ ಭಾರೀ ಕುಸಿತ ಕಂಡಿದೆ. ಸೆನ್ಸೆಕ್ಸ್ 1,600 ಪಾಯಿಂಟ್ ಹಾಗೂ ನಿಫ್ಟಿ 500 ಪಾಯಿಂಟ್ ಕುಸಿತ ಕಂಡಿದೆ.
ಬ್ಯಾಂಕ್ ನಿಫ್ಟಿಯಲ್ಲಿ 1500 ಅಂಕಗಳ ದೊಡ್ಡ ಕುಸಿತ ಕಂಡು ಬಂದಿದ್ದು, ಸರ್ಕಾರಿ ಕಂಪನಿಗಳ ಷೇರುಗಳಲ್ಲಿ ಕುಸಿತವು ಅಧಿಕವಾಗುತ್ತಿದೆ. ನಿಫ್ಟಿ, ಬ್ಯಾಂಕ್ ನಿಫ್ಟಿಯಲ್ಲಿ ಸುಮಾರು ಶೇ.3ರಷ್ಟು ಕುಸಿತ ಕಂಡಿದೆ. ಅದಾನಿ ಸಮೂಹದ ಎಲ್ಲಾ ಕಂಪನಿಗಳ ಷೇರುಗಳಲ್ಲಿ ಕುಸಿತವಾಗಿದೆ. ಅದಾನಿ ಪೋರ್ಟ್ಸ್ ಶೇರುಗಳಲ್ಲಿ ಶೇ.9, ಅದಾನಿ ಪವರ್ ಶೇ.10, ಅಂಬುಜಾ ಸಿಮೆಂಟ್ ಶೇ.10, ಅದಾನಿ ಎಂಟರ್ ಪ್ರೈಸಸ್ ಶೇ.10 ಕುಸಿತ ಕಾಣುತ್ತಿದೆ.