ಬೆಂಗಳೂರು: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮತ ಎಣಿಕೆ ಕಾರ್ಯ ಮುಂದುವರಿದ್ದು, ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಹಿನ್ನಡೆ ಕಂಡಿದ್ದಾರೆ.
ಸಿ.ಎನ್. ಮಂಜುನಾಥ್ ಮುನ್ನಡೆ ೨,೦೩,೪೧೧ ಮತಗಳನ್ನು ಸಂಪಾದಿಸಿದ್ದರೆ, ಡಿ.ಕೆ. ಸುರೇಶ್ ೧,೪೦,೭೧೧ ಮತಗಳನ್ನು ಗಳಿಸಿದ್ದಾರೆ. ೬೨,೭೦೦ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದ್ದು, ಭಾರಿ ಮತಗಳ ಅಂತರದೊಂದಿಗೆ ಬಿಜೆಪಿ ಅಭ್ಯರ್ಥಿ ಸಿ.ಎನ್. ಮಂಜುನಾಥ್ ಮುನ್ನಡೆ ಸಾಧಿಸಿದ್ದಾರೆ.