ಮಂಡ್ಯ: ಮಂಡ್ಯದ ವಿವಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಮಂಡ್ಯದಲ್ಲಿ ಹೆಚ್ಡಿಕೆ ಬಹುತೇಕ ಗೆಲುವು ಹಿನ್ನೆಲೆ ಹೆಚ್ಡಿಕೆಗೆ ಅಭಿನಂದಿಸಲು ಎಣಿಕೆ ಕೇಂದ್ರಕ್ಕೆ ಜಿಲ್ಲೆಯ ಜೆಡಿಎಸ್ ನಾಯಕರು ಆಗಮಿಸಿದ್ದಾರೆ.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಹೆಚ್.ಟಿ.ಮಂಜು, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವು ನಾಯಕರು ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ್ದಾರೆ.
ಇಂಡಿಯಾ ಅಂದರೇ ಮಂಡ್ಯ, ಮಂಡ್ಯ ಎಂದರೇ ಇಂಡಿಯಾ. ಮಂಡ್ಯದಲ್ಲಿ ಹೊಸಯುಗ ಆರಂಭವಾಗಿದೆ. ಜೆಡಿಎಸ್-ಬಿಜೆಪಿ ಯುಗ ಪ್ರಾರಂಭವಾಗಿದೆ ಎಂದು ಮಂಡ್ಯದಲ್ಲಿ ಮಾಜಿ ಸಚಿವ ಪುಟ್ಟರಾಜು ಹೇಳಿದ್ದಾರೆ.
ಹಿಂದಿನಿಂದಲೂ ಯಾರಿಗೆ ಬುದ್ದಿ ಕಲಿಸಬೇಕೋ ಕಲಿಸಿಕೊಂಡು ಬಂದಿದ್ದೆ. ಕುಮಾರಣ್ಣನ ಜನಪ್ರಿಯತೆಗೆ ಪ್ರಚಂಡ ಬಹುಮತದಿಂದ ಗೆದ್ದಿದ್ದಾರೆ. ಜಿಲ್ಲೆಯ ಜನರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ಜೆಡಿಎಸ್ ಸಂಕಷ್ಟದಲ್ಲಿರುವಾಗ ಗೆದ್ದಿರೋದು ಸಂತಸ ತಂದಿದೆ. ಇವತ್ತಿಂದ ಕಾಂಗ್ರೆಸ್ ನ ಬಂಡವಾಳ ಬಯಲಾಗುತ್ತೆ. ಈ ಸರ್ಕಾರ ಮುನ್ನಡೆಸೋದು ಕಷ್ಟವಿದೆ. ಮುಂದೆ ಏನೇನೂ ಆಗುತ್ತೆ ನೋಡ್ತೀರಿ. ಶಾಲಾ ಮಕ್ಕಳು ಬೀದಿಯಲ್ಲಿ ನಿಲ್ಲಿಸಿದ್ದಾರೆ. ಪೊಳ್ಳು ಭರವಸೆ ಮೇಲೆ ಸರ್ಕಾರ ನಡೆಯಲ್ಲ ಎಂದರು.
ಕಾಂಗ್ರೆಸ್ ಹಾಗೂ ಗ್ಯಾರಂಟಿ ವಿರುದ್ದ ಹರಿಹಾಯ್ದಿರುವ ಪುಟ್ಟರಾಜು, ಲೋಕಸಭೆಯಲ್ಲಿ ಸೋತರೇ ಗ್ಯಾರಂಟಿ ನಿಲ್ಲಿಸುವ ವಿಚಾರವಾಗಿ ಮಾತನಾಡಿ, ಸರ್ಕಾರದ ಅಜೆಂಡಾ ಇದೆ ಆಗಿದೆ. ನೂರಕ್ಕೆ ಸಾವಿರ ಭಾಗ ಕುಮಾರಸ್ವಾಮಿ ಮೋದಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗ್ತಾರೆ. ಅವರಿಗೆ ಕೃಷಿ ಸಚಿವ ಸ್ಥಾನ ಕೊಟ್ಟರೇ ಒಳ್ಳೆಯದು ಎಂದು ಹೇಳಿದರು.