ಬೆಳಗಾವಿ: ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಸೋಲು ಅನುಭವಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಗೆಲುವು ಕಂಡಿದ್ದಾರೆ.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್ ಈ ಚುನಾವಣೆ ಮೂಲಕ ಬಿಜೆಪಿಗೆ ವಾಪಸ್ ಬಂದಿದ್ದಾರೆ. ಬಿಜೆಪಿ ಪಾಲಿಗೆ ಬೆಳಗಾವಿ ಲೋಕಸಭಾ ಕ್ಷೇತ್ರವು ಭದ್ರಕೋಟೆಯಂತೆ ಇತ್ತು. ಸುರೇಶ್ ಅಂಗಡಿ ಸತತ ನಾಲ್ಕು ಬಾರಿ ಇಲ್ಲಿ ಗೆಲುವು ಪಡೆದಿದ್ದರು. ಇನ್ನೊಂದು ಬಾರಿ ಸುರೇಶ್ ಅಂಗಡಿ ಪತ್ನಿ ಮಂಗಲಾ ಸಂಸದರಾಗಿದ್ದರು. ಈ ಬಾರಿ ಜಗದೀಶ್ ಶೆಟ್ಟರ್ ಎಂಟ್ರಿಯಿಂದ ಭದ್ರಕೋಟೆಗೆ ಹಾನಿಯಾಗಬಹುದೇ ಎಂಬ ಚಿಂತೆ ಬಿಜೆಪಿಗರಲ್ಲಿತ್ತು. ಕಾಂಗ್ರೆಸ್‌ನವರು ಕೂಡ ಜಗದೀಶ್ ಶೆಟ್ಟರ್ ಎದುರು ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ ಕಣದಲ್ಲಿದ್ದರು.