Monday, April 21, 2025
Google search engine

Homeರಾಜಕೀಯಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆ: ಸೋಲಿನ ಬಳಿಕ ಡಿ.ಕೆ.ಸುರೇಶ್ ಪ್ರತಿಕ್ರಿಯೆ

ಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆ: ಸೋಲಿನ ಬಳಿಕ ಡಿ.ಕೆ.ಸುರೇಶ್ ಪ್ರತಿಕ್ರಿಯೆ

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಸಿ. ಎನ್. ಮಂಜುನಾಥ್ ಅವರ ವಿರುದ್ಧ ಸೋಲು ಅನುಭವಿಸಿದ ಬಳಿಕ ಎಂದು ಡಿ.ಕೆ.ಸುರೇಶ್ ಪ್ರತಿಕ್ರಿಯೆ ನೀಡಿದ್ದು, ‘ ಜನರ ತೀರ್ಮಾನವೇ ಅಂತಿಮ, ತೀರ್ಪಿಗೆ ತಲೆಬಾಗುತ್ತೇನೆ’ ಎಂದಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಯಕರ್ತರಿಗೆ, ನಾಯಕರುಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಚುನಾವಣೆನಲ್ಲಿ ಮತದಾರರ ತೀರ್ಮಾನ ಸ್ವಾಗತ ಮಾಡಿ ಡಾ. ಮಂಜುನಾಥ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಪಕ್ಷ ಅವಕಾಶ ಕೊಟ್ಟಿತ್ತು. ನಮ್ಮ ನಾಯಕರಾದ ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರುಗಳಿಗೆ ವಿಶೇಷ ಧನ್ಯವಾದ ಸಲ್ಲಿಸಿ ತಲೆಬಾಗುತ್ತೇನೆ’ ಎಂದರು.

ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದೇನೆ. ಹೊಸ ನಾಯಕತ್ವಕ್ಕೆ ಅವಕಾಶ ನೀಡಿದ್ದಾರೆ. ರಾಜಕೀಯ ಅಂತ್ಯವಾಗಿಲ್ಲ. ಸಾಮಾನ್ಯ ಪ್ರಜೆಯಾಗಿ , ಕಾರ್ಯಕರ್ತನಾಗಿ ಇರುತ್ತೇನೆ. ನಿಮ್ಮೊಂದಿಗೆ ಇರುತ್ತೇನೆ.ಯಾರೂ ಧೃತಿ ಗೆಡುವ ಅಗತ್ಯವಿಲ್ಲ’ ಎಂದರು.

ಹೋರಾಟ ಮಾಡಿದ ಅನುಭವ ಇದೆ . 100 % ಗೆಲ್ಲುವ ನಿರೀಕ್ಷೆ ಇತ್ತು. ಅಭಿವೃದ್ಧಿ ಕಾರ್ಯಗಳಿಗೆ ಬೆಂಬಲ ಕೊಡುತ್ತಾರೆ ಎನ್ನುವ ವಿಶ್ವಾಸ ಇತ್ತು. ಜನರ ತೀರ್ಮಾನವೇ ಅಂತಿಮ. ನಾನು ಬೇರೇನೂ ಮಾತನಾಡುವುದಿಲ್ಲ.ಜನಸಾಮನ್ಯರ ಜತೆ ಮುಂದಕ್ಕೂ ಕೂಡ ಇರುತ್ತೇನೆ ಎಂದರು.

ಉತ್ತರ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ  ಮೈತ್ರಿಕೂಟಕ್ಕೆ ಬೆಂಬಲ ನೀಡಿದ್ದಾರೆ. 400  ಸ್ಥಾನ ಗೆಲ್ಲುತ್ತೇವೆ ಎಂದು ಬಿಜೆಪಿ ಹೇಳಿತ್ತು ಅದು ಸಾಧ್ಯವಾಗಿಲ್ಲ ಎಂದರು.

RELATED ARTICLES
- Advertisment -
Google search engine

Most Popular