ಚಾಮರಾಜನಗರ: ನಾಲ್ವಡಿ ಕೃಷ್ಣರಾಜ ಒಡೆಯರ್ ತಮ್ಮ ದೂರದೃಷ್ಟಿ ಆಡಳಿತದ ಮೂಲಕ ಮೈಸೂರು ಅಭಿವೃದ್ಧಿಯ ಹರಿಕಾರರಾಗಿ ವಿಶ್ವವಿಖ್ಯಾತಿ ಗಳಿಸಿದ ಮಹಾನ್ ಮಹಾರಾಜರಾಗಿದ್ದರು ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್ ಜೈಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ,ಮೈಸೂರು ಇಂದು ಇಡೀ ವಿಶ್ವದಲ್ಲೇ ಪ್ರಸಿದ್ಧಿಯಾಗಿದೆ. ಧರ್ಮ, ಸಂಸ್ಕೃತಿ, ಪರಂಪರೆ ಇತಿಹಾಸ, ಕೃಷಿ, ವಿಜ್ಞಾನ, ತಂತ್ರಜ್ಞಾನ ,ವಿದ್ಯುತ್ ಉತ್ಪಾದನೆ, ಶಿಕ್ಷಣ ,ಕೈಗಾರಿಕೆ, ಗುಡಿ ಕೈಗಾರಿಕೆ ಮಹಿಳಾ ಅಭಿವೃದ್ಧಿ ,ಆಸ್ಪತ್ರೆಗಳ ನಿರ್ಮಾಣ ,ಕೈಗಾರಿಕೆಗಳ ಸ್ಥಾಪನೆ, ನೀರಾವರಿ , ಅಣೆಕಟ್ಟೆಗಳ ಸ್ಥಾಪನೆ ಶಿಕ್ಷಣ ಕಾಲೇಜುಗಳ ಸ್ಥಾಪನೆ ಹತ್ತು ಹಲವು ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿ ಇತಿಹಾಸದ ಅಭಿವೃದ್ಧಿಯಲ್ಲಿ ಶಾಶ್ವತ ಸ್ಥಾನವನ್ನು ಪಡೆದಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮೈಸೂರು ಭಾಗದ ಬಹುದೊಡ್ಡ ಕೀರ್ತಿವಂತರು .
ಇಂದಿಗೂ ಮೈಸೂರು ನಗರ ಸುಂದರ ಹಾಗೂ ವೈಭವದ ಕಟ್ಟಡಗಳು ಸಂಸ್ಕೃತಿ ಪರಂಪರೆಯ ವಾಸ್ತುಶಿಲ್ಪ ವಿಶ್ವ ಗಮನ ಸೆಳೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ವಿವರಿಸುವುದು ಬಹುದೊಡ್ಡದ ಕೆಲಸ .ವಿದ್ಯುತ್ ಉತ್ಪಾದನೆ, ಬಾಲ್ಯ ವಿವಾಹ ರದ್ದತಿ ,ಮಹಿಳಾ ಶಿಕ್ಷಣಕ್ಕೆ ಮತ್ತು ಹಿಂದುಳಿದವರ ಸುಧಾರಣೆ, ಮೈಸೂರು ಬೆಂಗಳೂರು ಮಂಡ್ಯ ಭದ್ರಾವತಿ ಗಳಲ್ಲಿ ಕೈಗಾರಿಕಾ ಸ್ಥಾಪನೆ, ಮಹಾರಾಣಿ ,ಮಹಾರಾಜ, ಯುವರಾಜ ಕಾಲೇಜುಗಳ ಸ್ಥಾಪನೆ, ಕೆಆರ್ ನಗರ ಸ್ಥಾಪನೆ, ಮಂಡ್ಯ ಜಿಲ್ಲೆ ನಿರ್ಮಾಣ ,ಮೈಸೂರು ವೈದ್ಯಕೀಯ ಸಂಸ್ಥೆಯ ಸ್ಥಾಪನೆ, ಕೆಆರ್ ಮಾರುಕಟ್ಟೆಯ ಸ್ಥಾಪನೆ ,ಮಂಡ್ಯ ಸಕ್ಕರೆ ಕಾರ್ಖಾನೆ, ವಾಣಿವಿಲಾಸ ಮಕ್ಕಳ ಆಸ್ಪತ್ರೆ ,ಕೆಆರ್ ಆಸ್ಪತ್ರೆ ನಿಮ್ಮನ್ ಆಸ್ಪತ್ರೆ ಕೆಆರ್ ಮಿಲ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಭಾರತೀಯ ವಿಜ್ಞಾನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ,ಕೃಷಿ ವಿಶ್ವವಿದ್ಯಾಲಯ ಹೀಗೆ ನೂರಾರು ಶಾಶ್ವತ ಕಾರ್ಯವನ್ನು ಮಾಡಿ ಮೈಸೂರು ಸಂಸ್ಥಾನದ ಜನ ಇಂದಿಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕುಟುಂಬಕ್ಕೆ ಚಿರಋಣಿ ಣಯಾಗಿದ್ದಾರೆ ಎಂದು ಋಗ್ವೇದಿ ತಿಳಿಸಿದರು.

ಪತಂಜಲಿ ಯೋಗ ಸಮಿತಿಯ ಯೋಗ ಪ್ರಕಾಶ್ ಮಾತನಾಡಿ ಮೈಸೂರು ಸಂಸ್ಥಾನದ ಆಡಳಿತ ಮತ್ತು ಅವರ ಅಭಿವೃದ್ಧಿಯ ಕಾರ್ಯ ಪ್ರತಿಯೊಬ್ಬರ ಹೃದಯದಲ್ಲು ನೆಲೆಸಿದೆ. ಮೈಸೂರು ನಗರದಲ್ಲಿ ಓಡಾಡಿದಾಗ ಆಗುವ ಸಂತೋಷ ಮತ್ತು ನೆಮ್ಮದಿ ರಸ್ತೆಗಳು ಕಟ್ಟಡಗಳು ಪಾರಂಪರಿಕ ಯೋಜನೆಗಳು ಗಮನ ಸೆಳೆಯುತ್ತದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನವನ್ನು ಆಚರಿಸುವ ಮೂಲಕ ಇತಿಹಾಸದ ಶ್ರೇಷ್ಠರನ್ನು ನೆನೆಯುವ ಕಾರ್ಯ ಬಹಳ ಮೆಚ್ಚುಗೆಯಾಗಿದೆ ಎಂದರು.
ಓಂ ಶಾಂತಿ ನ್ಯೂಸ್ ನ ಬಿಕೆ ಆರಾಧ್ಯ ಮಾತನಾಡಿ ಮೈಸೂರು ಚಾಮರಾಜನಗರ ಮಂಡ್ಯ ಬೆಂಗಳೂರು ತುಮಕೂರು ಕೊಡಗು ಪ್ರಾಂತ್ಯಗಳ ಜನರು ಇಂದಿಗೂ ಮೈಸೂರು ಮಹಾರಾಜರನ್ನು ಸದಾ ಕಾಲ ಗೌರವಿಸುತ್ತಾರೆ ಇವರ ಆಡಳಿತ ಜನರ ಸಮೃದ್ಧಿಯ ಸಮಗ್ರ ಅಭಿವೃದ್ಧಿಯ ಕಾಲವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಪಾರ ಕೊಡುಗೆಯನ್ನು ಯಾರು ಮರೆಯಲು ಸಾಧ್ಯವಿಲ್ಲ ಎಂದರು.
ಜೈ ಹಿಂದ್ ಪ್ರತಿಷ್ಠಾನದ.ಮಾರ್ಗದರ್ಶಕರಾದ ನಾಗಸಂದರ್, ಕುಸುಮ ಋಗ್ವೇದಿ ಸಮಾಜ ಸೇವಕ ಸುಂದರ್,ಶ್ರಾವ್ಯ ಉಪಸ್ಥಿತರಿದ್ದರು.