ಮೈಸೂರು: ನಗರದ ಪ್ರತಿಷ್ಠಿತ ಹೋಲಿ ಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇಂದು ಬುಧವಾರ ಪರಿಸರ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಅಧ್ಯಕ್ಷ ಡಾ.ಶಾಜಿಯಾ ಇಂದು ಮಾಲಿನ್ಯವನ್ನು ತಡೆಗಟ್ಟಲು ಪರಿಸರರಕ್ಷಣೆ ನಮ್ಮ ಆದ್ಯಕರ್ತವ್ಯವಾಗಬೇಕು. ಪ್ರತಿಯೊಬ್ಬರೂಗಿಡ ನೆಡಬೇಕು ಪರಿಸರ ಸಂರಕ್ಷೆಣೆ ನಮ್ಮ ಹೊಣೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಅಲ್ತಾಫ್‌ಅಹ್ಮದ್ ಅವರು ನಮ್ಮ ಆಧುನಿಕಜೀವನ ಶೈಲಿಯಿಂದ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರರಕ್ಷಣೆಯ ಅವಶ್ಯಕತೆಯಅರಿವು ಬೆಳೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಕ್ಕಳು ಪರಿಸರಜಾಗೃತಿ ಮೂಡಿಸುವಕಿರು ನಾಟಕವನ್ನು ಪ್ರದರ್ಶಿಸಿದರು. ಪರಿಸರದ ದಿನಾಚರಣೆಯ ಅಂಗವಾಗಿ ಶಾಲೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು ಸ್ಪರ್ಧಾ ವಿಜೇತರಿಗೆಆಡಳಿತ ಮಂಡಳಿಯ ವತಿಯಿಂದ ಪ್ರಶಸ್ತಿಗಳನ್ನು ಹಾಗೂ ಸಸಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಶಿವಮೂರ್ತಿ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಲತಾಆನಂದ್, ಆಡಳಿತಾಧಿಕಾರಿಗಳಾದ ಶ್ರೀ ಸ್ಟ್ಯಾನ್ಲಿಪಾಲ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
