ಮಂಗಳೂರು (ದಕ್ಷಿಣ ಕನ್ನಡ): ಬಿಸಿರೋಡ್ ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಜೋಗಿಬೆಟ್ಟು ಬಡೇಕೋಡಿ ಎಂಬಲ್ಲಿ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ ನೀರು ಹರಿದುಹೋಗುವ ದೃಶ್ಯ ಕಂಡು ಬಂತು.
ಬಡೆಕೋಡಿ ಎಂಬಲ್ಲಿ ಹೈವೆಯಿಂದ ಕ್ರಾಸಿಂಗ್ ರಸ್ತೆ ಯಲ್ಲಿ ಕೆಸರು ತುಂಬಿದ ನೀರು ಹರಿದು ಹೋದ ಪರಿಣಾಮ ಕೆಲಹೊತ್ತು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಶಾಲಾ ವಾಹನ ಇತರ ವಾಹನ ಸಂಚಾರಿಸಲು ಸಾಧ್ಯವಾಗದೆ ಸಂಚಾರಕ್ಕೆ ಅಡಚಣೆ ಉಂಟಾಯಿತು.