ಮೈಸೂರು: ಪರಿಸರ ರಕ್ಷಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಆದ್ದರಿಂದ ಪ್ರತಿಯೊಂದು ಮನೆಯವರು ಐದೈದು ಗಿಡಗಳನ್ನು ನೆಡುವ ಮೂಲಕ ಪರಿಸರವನ್ನು ರಕ್ಷಿಸಬೇಕು ಎಂದು ಜಯದೇವ ಹೃದ್ರೋಗ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ಕೆ.ಎಸ್. ಸದಾನಂದ ಕರೆ ನೀಡಿದರು.
ಮೈಸೂರಿನ ಜಯದೇವ ಆಸ್ಪತ್ರೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಟ್ಟು ಮಾತನಾಡಿದ ಅವರು, ನಮ್ಮ ಆಸ್ಪತ್ರೆ ಆವರಣದಲ್ಲಿ ಕಳೆದ ೫ ವರ್ಷಗಳಿಂದ ಸುಮಾರು ೫೦೦ ಗಿಡಗಳನ್ನು ನೆಡುತ್ತಾ ಬಂದಿದ್ದೇ-ವೆ. ಈ ಎಲ್ಲಾ ಗಿಡಗಳನ್ನು ಡಾ. ಶ್ವೇತಾ ಸದಾನಂದ ಅವರು ನೀಡಿದ್ದಾರೆ.
ಪರಿಸರ ಹಸಿರಾಗಿದ್ದಾರೆ. ಮನುಷ್ಯನ ಆರೋಗ್ಯವು ಚೆನ್ನಾಗಿರುತ್ತದೆ. ಮನುಷ್ಯನ ಉಸಿರಾಟಕ್ಕೆ ಗುಣಮಟ್ಟದ ಆಕ್ಸಿಜನ್ ದೊರೆಯುತ್ತದೆ. ಮೈಸೂರು ನಗರದ ಜನತೆ ಮೈಸೂರನ್ನು ಹಸಿರಿಕರಣ ಮಾಡಬೇಕು. ಮನುಷ್ಯ ಈಗಾಗಲೇ ಕಾಡನ್ನು ನಾಶಮಾಡಿ, ಕಟ್ಟಡಗಳನ್ಮು ನಿರ್ಮಿಸುತ್ತಿದ್ದಾರೆ. ಕೆರೆ ಕಟ್ಟೆಗಳು ಮುಚ್ಚಿ ಹೋಗುತ್ತಿವೆ. ಪ್ರಾಣಿ ಪಕ್ಷಿಗಳಿಗೆ ವಾಸಿಸಲು ಜಾಗವಿಲ್ಲದಂತಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಪ್ರೇಮಿಗಳಾಗಬೇಕು ಎಂದರು.
ಈ ಸಂದರ್ಭದಲ್ಲಿ ಡಾ. ರಜಿತ್, ಡಾ. ಮಂಜುನಾಥ್, ಡಾ. ದೇವರಾಜ್, ಡಾ. ಶುಶ್ರೂತ್, ಡಾ. ಅಚಲ್, ಹಿರಿಯ ಶುಶ್ರೂಷಾಧಿಕಾರಿ ಹರೀಶ್ ಕುಮಾರ್, ನರ್ಸಿಂಗ್ ಅಧೀಕ್ಷಕಿ ಯೋಗಲಕ್ಷ್ಮಿ, ಸ್ವರೂಪ, ಕಾವೇರಿ ಹರೀಶ್, ವಾಣಿ, ಉಮಾ, ಪುನೀತ್, ಸಯ್ಯದ್, ಮಹೇಂದ್ರ, ಸಂದಿಪ್, ಆನಂದ್, ಮಿಸ್ಬಾ ಹಾಜರಿದ್ದರು.