Saturday, April 19, 2025
Google search engine

Homeಸ್ಥಳೀಯBangalore-Mysore Expressway:​ ವಾಹನ ಸವಾರರಿಗೆ ಶಾಕ್: ಮತ್ತೊಂದು ಟೋಲ್​ ಬಿಸಿ

Bangalore-Mysore Expressway:​ ವಾಹನ ಸವಾರರಿಗೆ ಶಾಕ್: ಮತ್ತೊಂದು ಟೋಲ್​ ಬಿಸಿ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್​​ ಪ್ರೆಸ್ ಹೈವೇ ವಾಹನ ಸವಾರರಿಗೆ  ಮತ್ತೊಂದು ಟೋಲ್ ಬಿಸಿ ತಟ್ಟಲಿದೆ. ಹೌದು, ಜುಲೈ 1ರಿಂದ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿಯ ಟೋಲ್ ಪ್ಲಾಜಾ ಬಳಿ ಟೋಲ್ ಸಂಗ್ರಹ ಆರಂಭವಾಗಲಿದೆ.

ಜುಲೈ 1ರಿಂದ ಮಂಡ್ಯ ವ್ಯಾಪ್ತಿಯ ಟೋಲ್ ಸಂಗ್ರಹ ಆರಂಭವಾಗಲಿದೆ. ಮಂಡ್ಯ ಜಿಲ್ಲೆಯ 55-134 ಕಿಮೀ ವ್ಯಾಪ್ತಿಗೆ ಟೋಲ್ ಸಂಗ್ರಹಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಬಳಿ ಇರುವ ಟೋಲ್ ಪ್ಲಾಜಾ ನಿರ್ಮಿಸಿದೆ. ಯಾವ-ಯಾವ ವಾಹನಗಳಿಗೆ ಎಷ್ಟೆಷ್ಟು ಹಣ ಎನ್ನುವ  ಬಗ್ಗೆ ಇಲ್ಲಿದೆ ಮಾಹಿತಿ.

ಏಕಮುಖ ಸಂಚಾರಕ್ಕೆ ನಿಗದಿ ಮಾಡಿರುವ ಟೋಲ್ ಹಣ

ಕಾರು, ಜೀಪು, ವ್ಯಾನ್ ಗಳಿಗೆ 155 ರೂ.

ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 250 ರೂ.

ಟ್ರಕ್, ಬಸ್ (ಎರಡು ಆಕ್ಸಲ್ ಗಳದ್ದು) -525 ರೂ

ಮೂರು ಆಕ್ಸಲ್ ವಾಣಿಜ್ಯ ವಾಹನ – 575 ರೂ.

ಭಾರಿ ನಿರ್ಮಾಣ ಯಂತ್ರಗಳು ,ಭೂ ಅಗೆತದ ಸಾಧನಗಳು ,  ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ ಗಳದ್ದು) – 825 ರೂ.

ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1005 ರೂ.

ಅದೇ ದಿನ ಹೋಗಿಬರುವುದಕ್ಕೆ

ಕಾರು, ಜೀಪು, ವ್ಯಾನು – 235 ರೂ

ಲಘು ವಾಣಿಜ್ಯ ವಾಹನ, ಲಘು ಸರಕು ವಾಹನ, ಮಿನಿ ಬಸ್ – 375 ರೂ.

ಟ್ರಕ್, ಬಸ್ (ಎರಡು ಆಕ್ಸಲ್ ಗಳದ್ದು) -790 ರೂ.

ಮೂರು ಆಕ್ಸಲ್ ವಾಣಿಜ್ಯ ವಾಹನ – 860 ರೂ.

ಭಾರಿ ನಿರ್ಮಾಣ ಯಂತ್ರಗಳು, ಭೂ ಅಗೆತದ ಸಾಧನಗಳು, ಬಹು ಆಕ್ಸಲ್ ವಾಹನ (4ರಿಂದ 6 ಆಲೆಕ್ಸ್‌ಗಳದ್ದು) – 1240 ರೂ.

ದೊಡ್ಡ ಗಾತ್ರದ ವಾಹನ (7 ಅಥವಾ ಹೆಚ್ಚು ಆಕ್ಸಲ್ ಗಳದ್ದು) – 1510 ರೂ.

RELATED ARTICLES
- Advertisment -
Google search engine

Most Popular