ಮೈಸೂರು: ಮೈಸೂರಿನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಜೂನ್ ೫ರಂದು ೫೩ನೇ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಐಕ್ಯೂಎಸಿ ವಿವಿಸಿಇ, ಎನ್‌ಎಸ್‌ಎಸ್ ವಿವಿಸಿಇ, ಐಜಿಎಸ್ ಮೈಸೂರು ಚಾಪ್ಟರ್, ಎಸಿಸಿಇ (ಐ) ಮೈಸೂರು ಕೇಂದ್ರ, ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆ ಮತ್ತು ಮಣಿಪಾಲ ಆಸ್ಪತ್ರೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನಗರಗಳಲ್ಲಿ ಮಾಲಿನ್ಯದ ಹೆಚ್ಚಳ, ನಗರ ಪ್ರದೇಶಗಳಲ್ಲಿ ತಾಪಮಾನ ಏರಿಕೆ ಮತ್ತು ಸರಿಯಾದ ವಿಲೇವಾರಿ ಇಲ್ಲದೆ ಉತ್ಪತ್ತಿಯಾಗುವ ತ್ಯಾಜ್ಯದ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಅನಿರೀಕ್ಷಿತ ಮಳೆ, ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ, ಇತರೆ ಕಾರಣದಿಂದ ಪರಿಸರಕ್ಕೆ ಹಾನಿ ಸಂಭವಿಸುತ್ತಿದೆ ವಿವಿಸಿಇ ಪ್ರಾಂಶುಪಾಲ ಬಿ.ಸದಾಶಿವೇಗೌಡ ಹೇಳಿದರು. ನಗರ ಪ್ರದೇಶಗಳು ಹೆಚ್ಚಾದಂತೆ ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿವೆ.. ಇದರಿಂದಾಗಿ ನಗರ ಪ್ರದೇಶಗಳಲ್ಲಿ ಹಸಿರು ಪರಿಸರವನ್ನು ನೋಡುವುದೇ ಕಷ್ಟಕರವಾಗುತ್ತಿದೆ.. ಈ ಅಂಶಗಳನ್ನು ಪರಿಗಣಿಸಿ, ವಿಶ್ವಸಂಸ್ಥೆ ಜೂನ್ ೫, ೧೯೭೨ರಂದು ಸ್ವೀಡನ್‌ನ ಸ್ಟಾಕ್‌ಹೋಮ್‌ನಲ್ಲಿ ಪರಿಸರ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಹಾರ ಕ್ರಮಗಳನ್ನು ಹುಡುಕುವುದರ ಬಗ್ಗೆ ಚರ್ಚಿಸಲು ಸಮಾವೇಶವನ್ನು ಆಯೋಜಿಸಿತ್ತು. ಅಂದಿನಿಂದ ಜೂನ್ ೫ ರಂದು ವಿಶ್ವ ಪರಿಸರ ದಿನವನ್ನು ಜಗತ್ತು ಚರ್ಚಿಸುತ್ತಿದೆ ಎಂದು ವಿವಿಸಿಇ ಪ್ರಾಂಶುಪಾಲ ಬಿ.ಸದಾಶಿವೇಗೌಡ ಹೇಳಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ರೇಂಜ್ ಫಾರೆಸ್ಟ್ ಆಫೀಸರ್ ಧನ್ಯಶ್ರೀ ಮಾತನಾಡಿ, ಮರಗಳನ್ನು ನೆಡುವುದು ಮತ್ತು ಬೆಳೆಸುವುದು ಬಹಳ ಮುಖ್ಯವಾಗುತ್ತದೆ. ಯಾಕೆಂದರೆ, ಅವು ನಮ್ಮ ಮನುಕುಲಕ್ಕೇ ಅಲ್ಲದೆ ಪ್ರಾಣಿ ಸಂಕುಲಕ್ಕೂ ಆಶ್ರಯ ನೀಡುತ್ತವೆ.. ಜೊತೆಗೆ ನಮಗೆ ಆಮ್ಲಜನಕ ನೀಡುವುದರ ಜೊತೆ ಆಹ್ಲಾದಕರ ವಾತಾವರಣ ನೀಡುತ್ತವೆ.. ಹೀಗಾಗಿಯೇ ಸದಾ ಹಸಿರಿನಿಂದ ಕೂಡಿದ ಪ್ರವಾಸಿ ಸ್ಥಳಗಳಿಗೆ ಜನರು ಭೇಟಿ ನೀಡುತ್ತಾರೆ,, ಆದ್ದರಿಂದ ನಾವು ತಾಯಿ ಎಂದೇ ಕರೆಯುವ ಭೂಮಿಯನ್ನು ಹಸಿರು ಮತ್ತು ಸುಂದರವಾಗಿರುವಂತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ಹೇಳಿದರು.

ವಿಜಯನಗರ I ಸ್ಟೇಜ್‌ನಲ್ಲಿ ವಾಕಥಾನ್ ನಡೆಸಲಾಯಿತು..ರೈಲ್ವೇ ಲೇಔಟ್ ಅನ್ನು ಭೂಮಾತೆಯನ್ನು ಉಳಿಸುವ ಉದ್ದೇಶದ ಫಲಕಗಳು ಮತ್ತು ಘೋಷಣೆಗಳಿಂದ ಅಲಂಕರಿಸಲಾಗಿತ್ತು. ಆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ೧೦೦ ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಸುಮಾರು ಒಂದು ಗಂಟೆಯಲ್ಲಿ ೨.೫ ಕಿ.ಮೀ., ಅನಂತರ ೨೦೦ ವಿದ್ಯಾರ್ಥಿಗಳ ತಂಡ ಮುಖ್ಯ ಬ್ಲಾಕ್‌ನ ಮುಂಭಾಗದಲ್ಲಿ ಜಮಾಯಿಸಿದ್ದರು. ಇಆರ್. ಪಿ.ವಿಶ್ವನಾಥ್, ಕಾರ್ಯದರ್ಶಿ ವಿವಿಎಸ್ ಮೈಸೂರು; ಪ್ರಮೋದ್ ಕುಂದರ್, ನಿರ್ದೇಶಕ ಮಣಿಪಾಲ್ ಆಸ್ಪತ್ರೆ ಮೈಸೂರು; ಉಪೇಂದ್ರ ಶೆಣೈ, ಮಣಿಪಾಲ ಆಸ್ಪತ್ರೆ ಮೈಸೂರು ಮುಖ್ಯ ಅಧೀಕ್ಷಕ ಮತ್ತು ಡಾ. ಎಸ್ ರವಿರಾಜ್, ಅಧ್ಯಕ್ಷರು, ಎಸಿಸಿಇ (ಐ) ಮೈಸೂರು ಕೇಂದ್ರ ಇವರು ಜಾಗೃತಿ ಭಾಷಣ ಮಾಡಿದರು.