ವರದಿ : ವಿನಯ್ ದೊಡ್ಡಕೊಪ್ಪಲು
ಕೆ. ಆರ್ ನಗರ : ಎಳನೀರು ಕೀಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು, ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಮುಂಜನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಗ್ರಾಮದ ಕುಮಾರ ಮಹಾದೇವಿ ಎಂಬುವರ ಮಗ ಚೇತನ್ (27) ವರ್ಷ ವಯಸ್ಸು. ತನ್ನ ತಾಯಿ ಅನಾರೋಗ್ಯದಿಂದ ಇದ್ದ ಕಾರಣ ತೋಟದಲ್ಲಿ ಎಳನೀರು ತರಲು ತೋಟಕ್ಕೆ ಹೋಗಿದ್ದಾರೆ, ಮರ ಅತ್ತಿ ಎಳನೀರು ಕೀಳುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.
ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದು ಕುಮಾರ ಮಹಾದೇವಿ ಅವರ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಗಿಲ ಮುಟ್ಟಿತ್ತು . ಎಂ.ಕೆ ಚೇತನ್ ತಂದೆಯೊಂದಿಗೆ ಕೃಷಿ ಮಾಡುತ್ತಿದ್ದರು.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೆ ಆರ್ ನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ನೀಡಿದರು. ಕೃಷಿ ಇಲಾಖೆಯಿಂದ ಈ ಬಡ ಕುಟುಂಬಕ್ಕೆ ಪರಿಹಾರ ಒದಗಿಸಿ ಕೊಡುವಂತೆ ಗ್ರಾಮಸ್ಥರು ಒತ್ತಾಯಿಸಿದರು.