ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಪೂರ್ಣಕಾಲಿಕ ಪಿಎಚ್.ಡಿ ವಿದ್ಯಾರ್ಥಿಯಾಗಿದ್ದ ಅಮೃತೇಶ ಕನ್ನೊಳ್ಳಿ ಅವರು ಮಂಡಿಸಿದ “ಸಿಂಥೆಸಿಸ್ ಅಂಡ್ ಕ್ಯಾರಾಕ್ಟರೈಜೇಷನ್ ಆಫ್ ನ್ಯಾನೋಫೆರೈಟ್ಸ್ ಫಾರ್ ಬಯೊ-ಕೆಮಿಕಲ್ ಅಪ್ಲಿಕೇಶನ್ಸ್” ಎಂಬ ಮಹಾ ಪ್ರಬಂಧಕ್ಕೆ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಿದೆ.
ಭೌತಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಅವಿನಾಶ ಪಾಂಡುರಂಗ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇದಕ್ಕಾಗಿ ಪಿಎಚ್‍ಡಿ ಪದವಿ ನೀಡಿದೆ ಎಂದು ವಿವಿ ಪ್ರಕಟಣೆ ತಿಳಿಸಿದೆ.