Saturday, April 19, 2025
Google search engine

Homeಅಪರಾಧಉತ್ತರಾಖಂಡ ಚಾರಣಕ್ಕೆ ತೆರಳಿದ್ದ ಕುಂದಾಪುರ ಮೂಲದ ವ್ಯಕ್ತಿ ಸಾವು

ಉತ್ತರಾಖಂಡ ಚಾರಣಕ್ಕೆ ತೆರಳಿದ್ದ ಕುಂದಾಪುರ ಮೂಲದ ವ್ಯಕ್ತಿ ಸಾವು

ಉಡುಪಿ: ಉತ್ತರಾಖಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದ ಕುಂದಾಪುರ ಮೂಲದ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ.
ಕುಂದಾಪುರದ ಕುಂಭಾಶಿಯ ಪದ್ಮನಾಭ ಭಟ್ ಮೃತ ದುರ್ದೈವಿ.

ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದ ೨೨ ಮಂದಿಯ ಪೈಕಿ ಪದ್ಮನಾಭ ಭಟ್ ಕೂಡ ಒಬ್ಬರಾಗಿದ್ದರು. ಮೂಲತಃ ಕುಂದಾಪುರದವರಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದರು. ಪದ್ಮನಾಭ ಅವರು ಮೇ ೨೯ರಂದು ಉತ್ತರಕಾಂಡದ ಸಹಸ್ತ್ರ ತಾಲ್ ಶಿಖರಕ್ಕೆ ಚಾರಣಕ್ಕೆಂದು ತೆರಳಿದ್ದರು. ಚಾರಣ ಮುಗಿಸಿ ಶಿಖರದಿಂದ ಕೆಳಗೆ ಬರುವಾಗ ಹವಾಮಾನ ವೈಪರಿತ್ಯದಿಂದ ಈ ದುರ್ಘಟನೆ ಸಂಭವಿಸಿದ್ದು, ಕರ್ನಾಟಕದ ನಾಲ್ವರು ಸೇರಿ ಒಟ್ಟು ೯ ಮಂದಿ ಸಾವನ್ನಪ್ಪಿದ್ದರು.

೯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ ೪ ಮೃತದೇಹಗಳು ದೆಹಲಿಯಿಂದ ೨ ಪ್ರತ್ಯೇಕ ವಿಮಾನಗಳಲ್ಲಿ ಬೆಂಗಳೂರಿಗೆ ಬಂದಿವೆ. ಈಗಾಗಲೇ ಪದ್ಮನಾಭ್ ಅವರ ಮೃತದೇಹವನ್ನು ಹೊರತು ಪಡಿಸಿ ಉಳಿದ ಮೂವರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಇನ್ನು ಪದ್ಮನಾಭ್ ಅವರ ಮೃತದೇಹವನ್ನು ಕುಂದಾಪುರಕ್ಕೆ ತೆಗೆದುಕೊಂಡು ಬರಲು ಅಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular