ಚನ್ನಪಟ್ಟಣ: ಗಿಡ ನೆಟ್ಟು ಮರ ಬೆಳಸಿ ಪರಿಸರ ಸಂರಕ್ಷಣೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಿಸಿದರು.
ಪಟ್ಟಣದ ರೇಷ್ಮೆಸೀಮೆ ಪತ್ರಿಕೆಯ ಕಾರ್ಯಾಲಯದಲ್ಲಿ ಶುಕ್ರವಾರ ರಮೇಶ್ ಪ್ರಿಂಟರ್‍ಸ್‌ಗೆ ಬರುವ ಗ್ರಾಹಕರಿಗೆ ಗಿಡಗಳನ್ನು ಉಚಿತವಾಗಿ ನೀಡುವ ಮೂಲಕ “ಗಿಡ ನೆಟ್ಟು ಮರ ಬೆಳಸಿ” ಪರಿಸರ ಸಂರಕ್ಷಣೆ ಮಾಡುವ ಜನಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಬರದ ನಡುವೆ ನೂರಾರು ವರ್ಷಗಳಿಂದ ಕಾಣದ ಬಿಸಿಲಿನ ತಾಪವನ್ನು ಈ ವರ್ಷ ಎದುರಿಸಿದ್ದು ತಿಂಗಳಲ್ಲಿ ಮಳೆ ಬಾರದಿದ್ದರೆ ಮನುಷ್ಯರೆ ತರಗೆಲೆಯಂತೆ ಸುಟ್ಟು ಹೋಗುವ ಪರಿಸ್ಥಿತಿ ಇತ್ತು. ಇದಕ್ಕೆ ಕಾರಣ ನಮ್ಮ ಸುತ್ತಲಿನ ಮರ ಗಿಡಗಳನ್ನು ಕಡಿದು ಭೂಮಿಯನ್ನು ಕಾಂಕ್ರೀಟ್ ಮಯ ಮಾಡಿರುವುದು. ಅಲ್ಲದೆ ಬೆಟ್ಟ, ಗುಡ್ಡಗಳನ್ನು ಕಡಿದು ರೆಸಾರ್ಟ್, ಹೋಂ ಸ್ಟೇಗಳ ನಿರ್ಮಾಣ ಮಾಡಿ ಮೋಜು ಮಸ್ತಿಯ ತಾಣ ಮಾಡಿಕೊಂಡಿರುವ ನಿಟ್ಟಿನಲ್ಲಿ ಇಂದು ಮಳೆಯೂ ಇಲ್ಲದೆ. ಶುದ್ಧ ಗಾಳಿಯೂ ಇಲ್ಲದೆ, ಬಿಸಿಲಿನ ತಾಪದ ಕಿರಣಗಳು ನೇರವಾಗಿ ನಮ್ಮನ್ನು ಸುಡುವಂತಾಗಿದೆ ಈ ನಿಟ್ಟಿನಲ್ಲಿ ನಾವು ಪರಿಸರ ಸಂರಕ್ಷಣೆಗೆ ಮುಂದಾಗುವ ಅಗತ್ಯ ಇದೆ ಎಂದರು.
ಗಿಡಗಳನ್ನು ನೆಟ್ಟು ಬೆಳೆಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಈ ನಿಟ್ಟಿನಲ್ಲಿ ಜನಾಂದೋಲನ ಮಾಡಲು ನಮ್ಮ ಮುದ್ರಣಾಲಯದಕ್ಕೆ ಬರುವ ಗ್ರಾಹಕರಿಗೆ ಒಂದು ಗಿಡವನ್ನು ನೀಡಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುತ್ತಿದೇವೆ. ಗಿಡಗಳು ಮರವಾಗಿ ಬೆಳೆದರೆ ಭೂಮಿಯ ಫಲವತ್ತತೆಯನ್ನು ಹಿಡಿದಿಟ್ಟುಕೊಳ್ಳುವ ಜೊತೆಗೆ ನಮ್ಮ ಸುತ್ತಲೂ ಸುದ್ಧ ಗಾಳಿಯನ್ನು ನೀಡುತ್ತವೆ. ಅಲ್ಲದೆ ನುಗ್ಗೆ ಮರ ಆಹಾರ ಪದಾರ್ಥದಲ್ಲೇ ಶ್ರೇಷ್ಠವಾಗಿದ್ದು, ಇದರ ಜೊತೆಗೆ ಅಡಿಕೆ, ತೆಂಗು, ಸಪೋಟ, ಕರಿಬೇವು ಈಗೆ ಹಣ್ಣು, ತರಕಾರಿ, ಸೊಪ್ಪಿನ ಗಿಡಗಳನ್ನು ವಿತರಣೆ ಮಾಡುವುದರಿಂದ ಈ ಗಿಡಗಳನ್ನು ನೆಟ್ಟು ಪೋಷಣೆ ಮಾಡಿ ಅದರಿಂದ ಲಾಭ ಪಡೆಯುವ (ಹಣ್ಣು, ಸೊಪ್ಪು, ತರಕಾರಿ, ಕಾಯಿ) ಆಸೆಯಿಂದ ಜನರು ಗಿಡಗಳನ್ನು ನೆಟ್ಟು ಪೋಷಣೆ ಮಾಡುವಲ್ಲಿ ಹೆಚ್ಚಿನ ಆಸಕ್ತಿ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ಪಟ್ಟಣದ ಉದ್ಯಮಿಗಳು, ವ್ಯಾಪಾರಿಗಳು, ಅಂಗಡಿ ಮಳಿಗೆಯ ಮಾಲೀಕರು ತಮ್ಮಲ್ಲಿ ವ್ಯಾಪಾರ ವಹಿವಾಟಿಗೆ ಬರುವ ಗ್ರಾಹಕರಿಗೆ ಉಪಯುಕ್ತವಾದ ಗಿಡಗಳನ್ನು ವಿತರಣೆ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಜನಾಂದೋನಕ್ಕೆ ಮುಂದಾಗಬೇಕು ಎಂದು ನಮ್ಮಿಂದಲೇ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ರಮೇಶ್‌ಗೌಡರು ಜನಾಂದೋಲನದ ಮಾಹಿತಿ ತಿಳಿಸಿದರು.
ಪರಿಸರ ದಿನಾಚರಣೆಯ ದಿನ ಮಾತ್ರ ಒಂದೆಡು ಗಿಡಗಳನ್ನು ಟ್ಟು ರಕ್ಷಣೆ ಮಾಡುವುದು ಪರಿಸರ ಸಂರಕ್ಷಣೆ ಆಗುವುದಿಲ್ಲ. ಮೂರು ವರ್ಷಗಳ ಹಿಂದೆ ಕೊರೋನಾ ಸಂದರ್ಭದಲ್ಲಿ ಆಕ್ಸಿಜನ್ ಸಮಸ್ಯೆಯಿಂದ ಸಾವಿರಾರು ಜನರು ಸಾವನ್ನಪ್ಪಿದರು. ಈ ವೇಳೆ ಆಕ್ಸಿಜನ್‌ಗಾಗಿ ಲಕ್ಷಾಂತರ ಹಣ ತೆತ್ತಬೇಕಾದ ಸಂದರ್ಭ ಎದುರಾಯಿತು. ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿದ್ದ ಜನತೆ ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ಫಾರಂ ಹೌಸ್‌ಗಳತ್ತ ಮುಖ ಮಾಡಿದರೆ. ಸಂಘ-ಸಂಸ್ಥೆಗಳು ಗ್ರಾಮೀಣ ಪ್ರದೇಶದಲ್ಲಿ ಗಿಡ ನೆಡುವ ಆಂದೋಲನ ಮಾಡಿದರು ಆದರೆ ಇಂದು ಆ ಗಿಡಗಳ ಪರಿಸ್ಥಿತಿ ಏನಾಗಿದೆ ಎಂದು ನೋಡಿಲ್ಲ. ಈ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಜನರಿಂದ ಆಂದೋಲನ ಮಾಡಬೇಕು ಎಂಬ ನಿಟ್ಟಿನಲ್ಲಿ ಮನೆಯ ಸುತ್ತ ಮುತ್ತ ಬೆಳೆಯಬಹುದಾದ ಉಪಯುಕ್ತ ಗಿಡಗಳನ್ನು ನೀಡಿದರೆ ಜನರಿಗೆ ಗಿಡ ಬೆಳೆಯಲು ಹೆಚ್ಚಿನ ಆಸಕ್ತಿ ಬರುತ್ತದೆ. ಈ ನಿಟ್ಟಿನಲ್ಲಿ ಗ್ರಾಹಕರಿಗೆ ಗಿಡ ನೆಟ್ಟಿ ಆಂದೋಲನಕ್ಕೆ ಚಾಲನೆ ನೀಡಲಾಗಿದೆ ಎಂದು ರಮೇಶ್‌ಗೌಡರು ತಿಳಿಸಿದರು.

ಮದುವೆ, ನೆರವಿ, ತಿಥಿ ಸಮಾರಂಭದಲ್ಲಿ ತರಾವರಿ ಊಟಕ್ಕಾಗಿ ಹಣ ಖರ್ಚು ಮಾಡಿ ಪ್ರತಿಷ್ಠೆ ಮೆರೆಯುವ ಬದಲು ಸಮಾರಂಭಕ್ಕೆ ಬರುವ ಜನರಿಗೆ ಒಂದು ಗಿಡ ನೀಡಿ ಪೋಷಣೆ ಮಾಡಲು ಅರಿವು ಮೂಡಿಸಿದರೆ ಸಮಾರಂಭದ ನೆನಪಿನಲ್ಲಿ ಪರಿಸರ ಸಂರಕ್ಷಣೆಗೆ ಕೈಜೋಡಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಉಳ್ಳವರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ರಮೇಶ್‌ಗೌಡರು ಅಭಿಪ್ರಾಯಿಸಿದರು.