Tuesday, January 20, 2026
Google search engine

Homeಅಪರಾಧಕಾನೂನುಕರ್ತವ್ಯ ಲೋಪ: ಗದಗ ಗ್ರಾಮೀಣ ಠಾಣೆ ಸಿಪಿಐ ಸಸ್ಪೆಂಡ್

ಕರ್ತವ್ಯ ಲೋಪ: ಗದಗ ಗ್ರಾಮೀಣ ಠಾಣೆ ಸಿಪಿಐ ಸಸ್ಪೆಂಡ್

ಗದಗ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆ ಸಿಪಿಐ ಎಂ.ಎಂ ನದಾಫ್ ಅವರನ್ನು ಅಮಾನತು ಮಾಡಲಾಗಿದೆ. ಸಸ್ಪೆಂಡ್ ಮಾಡಿ ಗದಗ ಎಸ್ಪಿ ಬಿ.ಎಸ್ ನೇಮಗೌಡ ಆದೇಶ ಮಾಡಿದ್ದಾರೆ.

ಸಿಪಿಐ ನದಾಫ್ ಅವರು ಲಂಚ ಪಡೆದು ನೊಂದ ಕುಟುಂಬಸ್ಥರ ಮೇಲೆ ದೌರ್ಜನ್ಯ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಈ ಬಗ್ಗೆ ಶುಕ್ರವಾರ ಎಸ್ಪಿ ಕಚೇರಿ ಬಳಿ‌ ಅಡವಿಸೋಮಾಪುರ ಕುಟುಂಬಸ್ಥರು ಘೇರಾವ್ ಹಾಕಿದ್ದರು. ಹಲ್ಲೆ ಮಾಡಿದವರ ಪರವಾಗಿ ಸಿಪಿಐ ಕೆಲಸ ಮಾಡುತ್ತಿದ್ದಾನೆ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಜಿಮ್ಸ್ ಬಳಿಯ ಮೆಡಿಕಲ್ ಶಾಪ್ ‌ಮೇಲಿನ ದಾಳಿ, ಅಡವಿಸೋಮಾಪೂರ ಸಣ್ಣ ತಾಂಡಾದಲ್ಲಿ ಮನೆಗಳಿಗೆ ನುಗ್ಗಿ ಹಲ್ಲೆ ಪ್ರಕರಣಗಳು ನಿಭಾಯಿಸುವಲ್ಲಿ ಕರ್ತವ್ಯ ಲೋಪ, ಲಂಚ ಪಡೆದ ಆರೋಪ ಸೇರಿ ಹಲವಾರು ಪ್ರಕರಣಗಳಲ್ಲಿ ನಿರ್ಲಕ್ಷ್ಯ ಹಿನ್ನಲೆಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ. ಇಲಾಖೆ ತನಿಖೆಗೂ ಮೇಲಾಧಿಕಾರಿಗಳಿಗೆ ವರದಿ ಕಳಿಸಲಾಗಿದೆ.

RELATED ARTICLES
- Advertisment -
Google search engine

Most Popular