ವರದಿ: ಎಡತೊರೆ ಮಹೇಶ್
ಹೆಚ್.ಡಿ.ಕೋಟೆ : ಹಸಿರು ತರಕಾರಿ ಸೊಪ್ಪುಗಳನ್ನು ಸೇವನೆ ಮಾಡುವ ಮೂಲಕ ಉತ್ತಮ ಮಗುವಿಗೆ ಜನ್ಮ ನೀಡಿವಂತೆ ಪಿ.ಹೆಚ್.ಸಿ.ಓ ಭಾಗೀರಥಿ ತಿಳಿಸಿದರು.
ಸ್ವಾಮಿ ವಿವೇಕಾನಂದ ಯೂತ್ ಮುವ್ ಮೆಂಟ್ ಸರಗೂರು ಹಾಗೂ ಆಶ್ರಯ ಹಸ್ತ ಟ್ರಸ್ಟ್ ಮತ್ತು ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಶಿಶು ಅಭಿವೃದ್ದಿ ಯೋಜನೆ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮುಸ್ಕೆರೆ ಹಾಡಿಯಲ್ಲಿ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮವನ್ನು ದೀಪಾ ಬೆಳಗಿಸುವ ಮೂಲಕ ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪಿ.ಹೆಚ್.ಸಿ.ಓ. ಭಾಗೀರಥಿ ಉದ್ಘಾಟಿಸಿ ಮಾತನಾಡಿದರು.
ತಾಯಂದಿರು ಗರ್ಭಿಣಿಯ ಸಂಧರ್ಭದಲ್ಲಿ ಸಂತೋಷವಾಗಿದ್ದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು ಎಂಬ ಉದ್ದೇಷದಿಂದ ಸೀಮಂತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಗರ್ಭಿಣಿಯರು ಹೆಚ್ಚಾಗಿ ಹಸಿರು ಸೊಪ್ಪು, ತರಕಾರಿ ಹಳದಿ ಹಣ್ಣುಗಳನ್ನು ಸೇವನೆ ಮಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ವೃದ್ಧಿಯಾಗುತ್ತದೆ, ಜೊತೆಗೆ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬೇಕು ಈ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನಂತರ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಸವಿತಾ ಗರ್ಭಿಣಿಯರಿಗೆ ಮಾತೃ ಪೂರ್ಣ ಯೋಜನೆಯ ಮೂಲಕ ಪೌಷ್ಟಿಕ ಆಹಾರವನ್ನು ನೀಡುತ್ತಿದ್ದು ಎಲ್ಲರು ಅಂಗನವಾಡಿ ಕೇಂದ್ರಕ್ಕೆ ಬಂದು ಊಟ ಮಾಡಬೇಕು, ಮಾತೃ ವಂದನಾ ಕಾರ್ಯದ ಮೂಲಕ ಸರ್ಕಾರದಿಂದ ಮೊದಲನೇ ಮಗುವಿಗೆ 5000 ಸಾವಿರ ಹಾಗೂ ಎರಡನೇ ಹೆಣ್ಣು ಮಗುವಿಗೆ 6000 ಸಾವಿರ ಹಣವನ್ನು ನೀಡುತ್ತಿದ್ದು ಇದನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ 7 ಜನರಿಗೆ ಸೀರೆ ಹೂ ಬಳೆ ತಾಂಬೂಲ ನೀಡಿ ಸೀಮಂತ ಮಾಡಲಾಯಿತು
ಕಾರ್ಯಕ್ರಮದಲ್ಲಿ ಭೀಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯ, ಅಣ್ಣೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿ.ಹೆಚ್.ಓ ವಿರೇಶ್, ಆಶಾ ಮೇಲ್ವಿಚಾರಕರಾದ ಜಯಮ್ಮ, ಆಶಾ ಕಾರ್ಯಕರ್ತೆ ರೇಣುಕಾ, ರೇಣುಕಾ, ಎಸ್.ವಿ.ವೈ.ಎಂ ಸಂಯೋಜಕರಾದ ಶಿವಲಿಂಗ್, ಆರೋಗ್ಯ ಕಾರ್ಯಕರ್ತೆಯರಾದ ಸಿದ್ದಲಿಂಗನಾಯಕ, ಪುನೀತ್ ರಾಜ್, ಹಾಡಿಯ ಗರ್ಭಿಣಿಯರು, ಮಹಿಳೆಯರು ಮಕ್ಕಳು ಇದ್ದರು.