Saturday, April 19, 2025
Google search engine

Homeರಾಜ್ಯಸುದ್ದಿಜಾಲಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಲಿದೆ: ಸಂದೇಶ್ ಸ್ವಾಮಿ

ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಲಿದೆ: ಸಂದೇಶ್ ಸ್ವಾಮಿ

ಮೋದಿ 3: ಚಹಾ ವಿತರಿಸಿ ಸಂಭ್ರಮ

ಮೈಸೂರು: ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಸೇನೆ ಹಾಗೂ ನರೇಂದ್ರ ಮೋದಿ ಅಭಿಮಾನಿ ಬಳಗದ ವತಿಯಿಂದ ಅಗ್ರಹಾರದ 101 ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ವಿಶೇಷ ಪೂಜೆ ಆ ನಂತರ ಸಾರ್ವಜನಿಕರಿಗೆ ಚಹಾ ವಿತರಿಸಿ ಸಂಭ್ರಮಿಸಲಾಯಿತು.

ಈ ವೇಳೆ ಮಾಜಿ ಮಹಾಪೌರರಾದ ಸಂದೇಶ ಸ್ವಾಮಿ ಮಾತನಾಡಿ ದೇಶದ ಎಲ್ಲ ಜಾತಿ, ಧರ್ಮ, ರಾಜಕೀಯ ಶಕ್ತಿಗಳು ಒಗ್ಗೂಡಿ ಷಡ್ಯಂತ್ರ ನಡೆಸಿದರೂ ಮೋದಿ ಅವರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ
ಪ್ರಬುದ್ಧ ಮತದಾರರ ಬೆಂಬಲ ಬಿಜೆಪಿಗೆ ಇದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ನರೇಂದ್ರ ಮೋದಿ ಯವರು ಮೂರನೇ ಬಾರಿಗೆ ನಮ್ಮ ದೇಶದ ಪ್ರಧಾನಿ ಮಂತ್ರಿ ಯಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯ, ದೇಶವನ್ನು ಮುನ್ನುಡಿಸುವುದು ಮತ್ತು ನಮ್ಮ ದೇಶವನ್ನು ವಿಶ್ವಾದ್ಯಂತ ಪರಿಚಯಿಸಿ ವಿವಿಧ ದೇಶಗಳಿಂದ ಬಂಡವಾಳಗಳನ್ನು ತಂದು ಮೇಕ್ ಇನ್ ಇಂಡಿಯಾ ಅಂತಹ ಯೋಜನೆಗಳನ್ನು ಮಾಡಿದರು, ಇಂದು ಇಡೀ ಭಾರತದಾದ್ಯಂತ ಎನ್ ಡಿ ಎ ಅಭೂತಪೂರ್ವ ಬಹು ಮತ ಪಡೆದು ಜಯಭೇರಿ ಸಾಧಿಸಿರುವುದು ಪ್ರಜಾಪ್ರಭುತ್ವದಲ್ಲಿ ಇತಿಹಾಸ ಬರೆದಿದ್ದಾರೆ .

ಬಡವರ ಪರ ಕಾಳಜಿ ಇರುವ ಏಕೈಕ ವ್ಯಕ್ತಿ ಇದ್ದರೆ ಅದು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರಮೋದಿ , ಮೋದಿ ತಮ್ಮ ಅಧಿಕಾರದ ಅವಧಿಯಲ್ಲಿ ಅನೇಕ ದಿಟ್ಟ ನಿರ್ಧಾರಗಳ ಜೊತೆಗೆ ಜನಪರ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತ ವಿಶ್ವಗುರುವಾಗಲಿದೆ’ ಎಂದು ಹೇಳಿದರು

ನಂತರ ಮಾತನಾಡಿದ ಮಾಜಿ ಮಹಾಪೌರರಾದ ಶಿವಕುಮಾರ್ ದೇಶದಲ್ಲಿ ಮತದಾರ ಎನ್‌ಡಿಎ ಒಕ್ಕೂಟಕ್ಕೆ ಸ್ಪಷ್ಟ ಬಹುಮತ ನೀಡಿದ್ದು,ಮುಂದಿನ 10 ವರ್ಷಗಳ ಕಾಲ ಪ್ರಧಾನಿ ನರೇಂದ್ರ ಮೋದಿಯವರ ದೇಶದಲ್ಲಿ ಸುಭದ್ರ ಸರ್ಕಾರವನ್ನು ನೀಡಲಿದ್ದಾರೆ, ಎನ್ ಡಿ ಎ ನೇತೃತ್ವದ ಸರ್ಕಾರ ದೇಶದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಿದೆ, ಭಾರತ ಈ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಮಹಾಪೌರರಾದ ಸಂದೇಶ್ ಸ್ವಾಮಿ, ಶಿವಕುಮಾರ್, ಮಾಜಿ ಮೂಡಾ ಅಧ್ಯಕ್ಷರಾದ ಯಶಸ್ವಿ ಸೋಮಶೇಖರ್, ಮಾಜಿನಗರ ಪಾಲಿಕಾ ಸದಸ್ಯರಾದ ಮ ವಿ ರಾಮ್ ಪ್ರಸಾದ್, ಸೌಮ್ಯ ಉಮೇಶ್, ಜಗದೀಶ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಯದುವೀರ್ ಒಡೆಯರ ಸೇನೆ ಅಧ್ಯಕ್ಷರಾದ ಬೈರತಿ ಲಿಂಗರಾಜು, ಜೆ.ಡಿ.ಎಸ್ ಕಾರ್ಯಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್, ಸುಚೇಂದ್ರ, ಜನಸೇವಕ ಯುವ ಬ್ರಿಗೇಡ್ ಅಧ್ಯಕ್ಷ ರಾಘವೇಂದ್ರ, ಉಮೇಶ್, ಬಿಲ್ಲಯ್ಯ ಅಶೋಕ ಪುರಂ, ಸದಾಶಿವ, ಚಕ್ರಪಾಣಿ, ಹಾಗೂ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular