Sunday, April 20, 2025
Google search engine

Homeಅಪರಾಧಅಶ್ಲೀಲ ವೀಡಿಯೋಗಳು ಬೆಳಕಿಗೆ ಬರಲು ಕಾರಣವಾಗಿದ್ದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಬಂಧನ

ಅಶ್ಲೀಲ ವೀಡಿಯೋಗಳು ಬೆಳಕಿಗೆ ಬರಲು ಕಾರಣವಾಗಿದ್ದ ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಬಂಧನ

ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಬೆಳಕಿಗೆ ಬರಲು ಕಾರಣವಾಗಿದ್ದ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಎಸ್‌ಐಟಿ ಬಂಧಿಸಿದೆ.

ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗಡಿಭಾಗದಲ್ಲಿ ಕಾರ್ತಿಕ್‌ನನ್ನು ಎಸ್‌ಐಟಿ ಪೊಲೀಸರು ಬಂಧಿಸಿ ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಕಾರ್ತಿಕ್ ಮತ್ತು ಐವರ ಮೇಲೆ ಎ. ೨೩ರಂದು ಜೆಡಿಎಸ್ ಮುಖಂಡ, ವಕೀಲ ಪೂರ್ಣಚಂದ್ರ ತೇಜಸ್ವಿ ಪ್ರಕರಣ ದಾಖಲಿಸಿ ದ್ದರು. ಅನಂತರ ಆರೋಪಿಗಳು ಹಾಸನದ ನ್ಯಾಯಾಲಯದಲ್ಲಿ ನಿರೀಕ್ಷಣ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಹೈಕೋರ್ಟ್‌ನಲ್ಲಿ ಪ್ರಯತ್ನಿಸಿದ್ದರೂ ಜಾಮೀನು ಸಿಕ್ಕಿರಲಿಲ್ಲ.ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾದ ಜೂ.೪ರಂದು ಹಾಸನದಲ್ಲಿ ಕಾರ್ತಿಕ್ ಮತ್ತು ಶರತ್ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.

ಪೊಲೀಸರ ಎದುರೇ ಸಂಭ್ರಮಾಚರಣೆಯಲ್ಲಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಒಂದೂವರೆ ತಿಂಗಳನಿಂದ ಆರೋಪಿಗಳನ್ನು ಬಂಧಿಸದ ಎಸ್‌ಐಟಿ ಧೋರಣೆ ಬಗ್ಗೆ ಜೆಡಿಎಸ್ ಮುಖಂಡರು ಕಾನೂನು ಹೋರಾಟಕ್ಕೂ ಸಜ್ಜಾಗಿದ್ದ ಹೊತ್ತಿನಲ್ಲೇ ಕಾರ್ತಿಕ್‌ನನ್ನು ಬಂಧಿಸಲಾಗಿದೆ.

RELATED ARTICLES
- Advertisment -
Google search engine

Most Popular