Sunday, April 20, 2025
Google search engine

Homeಅಪರಾಧಉಳ್ಳಾಲ: ವಿಜಯೋತ್ಸವ ಸಂದರ್ಭ ಚಕಮಕಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಇರಿತ

ಉಳ್ಳಾಲ: ವಿಜಯೋತ್ಸವ ಸಂದರ್ಭ ಚಕಮಕಿ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಇರಿತ

ಉಳ್ಳಾಲ: ವಿಜಯೋತ್ಸವದಲ್ಲಿ ಭಾಗವಹಿಸಿದ್ದ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ತಂಡವೊಂದು ಚೂರಿಯಿಂದ ಇರಿದ ಘಟನೆ ಕೊಣಾಜೆ ಠಾಣೆ ವ್ಯಾಪ್ತಿಯ ಬೋಳಿಯಾರು ಸಮೀಪ ರವಿವಾರ ರಾತ್ರಿ ನಡೆದಿದೆ.

ಗಾಯಾಳುಗಳನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನೋಳಿ ಧರ್ಮನಗರದ ಹರೀಶ್‌ ಹಾಗೂ ನಂದನ್‌ ಕುಮಾರ್‌ ಗಾಯ ಗೊಂಡವರು.

ಘಟನೆಯ ವಿವರ

ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಮತ್ತು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್‌ ಚೌಟ ಅವರ ವಿಜಯೋತ್ಸವದ ಅಂಗವಾಗಿ ಬೋಳಿಯಾರು ಬಿಜೆಪಿ ಗ್ರಾಮಸಮಿತಿ ವತಿಯಿಂದ ಚೇಳೂರು, ಬೋಳಿಯಾರು ಮಾರ್ಗವಾಗಿ ಧರ್ಮನಗರದ ವರೆಗೆ ವಿಜಯೋತ್ಸವ ಮೆರವಣಿಗೆ ಆಯೋಜಿಸಲಾಗಿತ್ತು.

ರ್‍ಯಾಲಿ ಮುಗಿಸಿ ಮನೆಗೆ ತೆರಳಿದ್ದ ಹರೀಶ ಮತ್ತು ನಂದನ್‌ ಅಂಗಡಿಯಿಂದ ಯಾವುದೋ ಸಾಮಗ್ರಿ ಖರೀದಿಸಿ ತರಲೆಂದು ಬೋಳಿಯಾರು ಕ್ರಾಸ್‌ನತ್ತ ಮರಳಿ ಬಂದಿದ್ದರು. ಮನೆಗೆ ಮರಳು ವಾಗ ಅವರು ಕೇಸರಿ ಶಾಲು ಧರಿಸಿದ್ದನ್ನು ನೋಡಿದ ತಂಡವೊಂದು ತಡೆದು ಬೆದರಿಸಿದ್ದಲ್ಲದೆ ಬೈಕಿನ ಮುಂದೆ ಹರೀಶ್‌ ಅವರ ಹೊಟ್ಟೆಗೆ ಮತ್ತು ನಂದನ್‌ ಅವರ ಬೆನ್ನಿಗೆ ಚೂರಿಯಿಂದ ಇರಿಯಿತು. ಬಳಿಕ ಕೃತ್ಯ ಎಸಗಿದ ತಂಡ ಪರಾರಿಯಾಗಿದೆ. ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನೆಲೆಸಿದೆ.

ಬೋಳಿಯಾರು ನಿವಾಸಿ ಪಿಕಪ್‌ ಚಾಲಕ ಕೃತ್ಯ ಎಸಗಿರುವುದಾಗಿ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳಿಗೆ ಶೋಧ ಕಾರ್ಯ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular