Sunday, April 20, 2025
Google search engine

Homeಅಪರಾಧಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಡೆತ್ ನೋಟ್ ಪತ್ತೆ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಡೆತ್ ನೋಟ್ ಪತ್ತೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರು ಅತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಅಪ್ರಾಪ್ತ ಬಾಲಕಿಯ ಡೆತ್ ನೋಟ್ ಪತ್ತೆಯಾಗಿದೆ

ಅಪ್ರಾಪ್ತೆ ಬಾಲಕಿ ಡೆತ್ ನೋಟ್ ನಲ್ಲಿ, ಲೋಕೇಶ್ ಕಿರುಕುಳಕ್ಕೆ ಬೇಸತ್ತು ಕ್ರಿಮಿನಾಶಕ ಸೇವಿಸಿದ್ದೇವೆ ಎಂದು ಬಾಲಕಿ ಎಳೆಎಳೆಯಾಗಿ ಡೆತ್ ನೋಟ್ ನಲ್ಲಿ ಬರೆದಿದ್ದಾಳೆ. ಲೋಕೇಶ್ ಎಲ್ಲಾ ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾನ. ನನ್ನನ್ನೂ ಸಹ ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ. ಲೋಕೇಶ್ ನಮ್ಮ ಕುಟುಂಬದ ಮಾನ ಮರ್ಯಾದೆ ತೆಗೆದಿದ್ದಾನೆ. ಅತನನ್ನು ಸುಮ್ಮನೆ ಬಿಟ್ಟರೆ ಎಷ್ಟೋ ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡುತ್ತಾನೆ. ತನಗಾದ ಅಪಮಾನ, ಮಾನಸಿಕ ಹಿಂಸೆ ಕುರಿತು ಬಾಲಕಿ ಡೆತ್ ನೋಟ್‌ನಲ್ಲಿ ಬರೆದಿದ್ದಾಳೆ.

ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಮೃತ ಮಹದೇವ ನಾಯಕ ಅವರ ಮೊಮ್ಮಗಳನ್ನು ಲೋಕೇಶ್ ಪ್ರೀತಿಸುತ್ತಿದ್ದ. ಬಾಲಕಿಯ ಖಾಸಗಿ ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ. ದೂರು ನೀಡಿದರು ಪೊಲೀಸರಿಂದ ನ್ಯಾಯ ಸಿಕ್ಕಿರಲಿಲ್ಲ. ಇದರಿಂದ ಮನನೊಂದು ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದರು. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ.

RELATED ARTICLES
- Advertisment -
Google search engine

Most Popular