Saturday, April 19, 2025
Google search engine

Homeಅಪರಾಧಕಾನೂನು13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಭಾರತದ ಚುನಾವಣಾ ಆಯೋಗವು 13 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕವನ್ನು ಘೋಷಿಸಿದೆ.

ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಮಧ್ಯಪ್ರದೇಶ, ಉತ್ತರಾಖಂಡ, ಪಂಜಾಬ್, ಹಿಮಾಚಲಪ್ರದೇಶದ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಪ್ರಕಟಿಸಿದೆ.

ಜುಲೈ 10ರಂದು ಚುನಾವಣೆ ನಡೆಯಲಿದ್ದು, ಜುಲೈ 13ರಂದು ಮತ ಎಣಿಕೆ ನಡೆಯಲಿದೆ.

ವಿಧಾನಸಭಾ ಉಪಚುನಾವಣೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: ಅಧಿಸೂಚನೆ:ಜೂನ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 21 ನಾಮಪತ್ರ ಪರಿಶೀಲನೆ: ಜೂನ್ 24 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕ: ಜೂನ್ 26 ಮತದಾನದ ದಿನಾಂಕ: ಜುಲೈ 10 ಫಲಿತಾಂಶ: ಜುಲೈ 13

ಜುಲೈ 10 ರಂದು ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಪಟ್ಟಿ ಇಲ್ಲಿದೆ

ಬಿಹಾರ: ಬಿಮಾ ಭಾರತಿ ಅವರ ರಾಜೀನಾಮೆಯಿಂದ ತೆರವಾದ ರುಪೌಲಿ ಸ್ಥಾನ ಪಶ್ಚಿಮ ಬಂಗಾಳ: ಕೃಷ್ಣ ಕಲ್ಯಾಣಿಯ ರಾಜೀನಾಮೆಯಿಂದ ತೆರವಾದ ರಾಯಗಂಜ್ ಸ್ಥಾನ ಡಾ. ಮುಕುತ್ ಮಣಿ ಅಧಿಕಾರಿ ರಾಜೀನಾಮೆಯಿಂದ ತೆರವಾದ ಪಶ್ಚಿಮ ಬಂಗಾಳದ ರಣಘಾಟ್ ದಕ್ಷಿಣ ಸ್ಥಾನ

ಪಶ್ಚಿಮ ಬಂಗಾಳ: ಬಿಸ್ವಜಿತ್ ದಾಸ್ ರಾಜೀನಾಮೆಯಿಂದ ತೆರವಾದ ಬಗ್ಡಾ ಸೀಟು

ಪಶ್ಚಿಮ ಬಂಗಾಳ: ಸಾಧನ್ ಪಾಂಡೆ ನಿಧನಕ್ಕೆ ಮಾಣಿಕ್ತಾಲಾ ಸ್ಥಾನ

ತಮಿಳುನಾಡು: ತಿರು ಸಾವಿನಿಂದ ಖಾಲಿ ಉಳಿದ ವಿಕ್ರವಾಂಡಿ ಸೀಟ್

ಮಧ್ಯಪ್ರದೇಶ: ಕಮಲೇಶ್ ಪ್ರತಾಪ್ ಶಾ ಅವರ ರಾಜೀನಾಮೆಯಿಂದಾಗಿ ತೆರವಾದ ಸ್ಥಾನ

ಉತ್ತರಾಖಂಡ: ರಾಜೇಂದ್ರ ಸಿಂಗ್ ಭಂಡಾರಿ ಅವರ ರಾಜೀನಾಮೆಯಿಂದ ಖಾಲಿ ಉಳಿದ ಬದರಿನಾಥ್ ಸ್ಥಾನ

ಉತ್ತರಾಖಂಡ: ಸರ್ವತ್ ಕರೀಂ ಅನ್ಸಾರಿ ಅವರ ನಿಧನದಿಂದ ತೆರವಾದ ಸ್ಥಾನ ಶೀತಲ್ ಅಂಗುರಾ ಅವರ ರಾಜೀನಾಮೆಯಿಂದಾಗಿ ತೆರವಾದ ಪಂಜಾಬ್ ಜಲಂಧರ್ ಪಶ್ಚಿಮ ಸ್ಥಾನ

ಹಿಮಾಚಲ ಪ್ರದೇಶ: ಹೋಶ್ಯಾರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ತೆರವಾದ ಡೆಹ್ರಾ ಸ್ಥಾನ

ಹಿಮಾಚಲ ಪ್ರದೇಶ: ಆಶಿಶ್ ಶರ್ಮಾ ಅವರ ರಾಜೀನಾಮೆಯಿಂದ ತೆರವಾದ ಹಮೀರ್‌ಪುರ ಸ್ಥಾನ

ಹಿಮಾಚಲ ಪ್ರದೇಶ: ಕೆಎಲ್ ಠಾಕೂರ್ ಅವರ ರಾಜೀನಾಮೆಯಿಂದ ತೆರವಾದ ನಲಗಢ ಸ್ಥಾನ

RELATED ARTICLES
- Advertisment -
Google search engine

Most Popular