ತಾಂಡವಪುರ: ವರುಣ ವಿಧಾನಸಭಾ ಕ್ಷೇತ್ರದ ಜನತೆಯ ಪ್ರೀತಿ ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇವೆ ಅವರ ಋಣ ನಮ್ಮ ಮೇಲಿದೆ. ಕ್ಷೇತ್ರದ ಅಭಿವೃದ್ಧಿ ಪಡಿಸುವ ಮೂಲಕ ಕ್ಷೇತ್ರದ ಜನತೆಯ ಋಣಭಾರವನ್ನು ಕಡಿಮೆ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನಾವು ಏನೇ ಮಾಡಿದರು ಕ್ಷೇತ್ರದ ಜನತೆಯ ಋಣವನ್ನು ತಿಳಿಸಲು ಸಾಧ್ಯವಿಲ್ಲ ಎಂದು ನೂತನವಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ವರುಣ ಕ್ಷೇತ್ರದ ಆಶ್ರಯ ಸಮಿತಿಯ ಅಧ್ಯಕ್ಷರಾದ ಡಾ.ಯತೀಂದ್ರ ಸಿದ್ದರಾಮಯ್ಯನವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಇಂದು ವರುಣ ಕ್ಷೇತ್ರದ ಕಾಂಗ್ರೆಸ್ ಹಿರಿಯ ಮುಖಂಡ ಸಕಳ್ಳಿ ಬಸವರಾಜು ರವರ ನೇತೃತ್ವದ ನಿಯೋಗವು ಡಾ. ಯತಿಂದ್ರ ಸಿದ್ರಾಮಯ್ಯನವರನ್ನು ಭೇಟಿ ಮಾಡಿ ವರುಣ ಕ್ಷೇತ್ರದ ಪರವಾಗಿ ಡಾ.ಯತೀಂದ್ರ ಸಿದ್ರಾಮಯ್ಯನವರಿಗೆ ಭಾರಿ ಗಾತ್ರದ ಹೂವಿನ ಹಾರ ಹಾಕುವ ಮೂಲಕ ಸನ್ಮಾನಿಸಿ ಗೌರವಿಸಿ ಅಭಿನಂದಿಸಿದರು.
ಇದೆ ವೇಳೆ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯನವರು ವರುಣ ವಿಧಾನಸಭಾ ಕ್ಷೇತ್ರದ ಜನತೆ ನಮ್ಮ ತಂದೆ ಸಿದ್ದರಾಮಯ್ಯನವರು ಎರಡು ಬಾರಿ ಮುಖ್ಯಮಂತ್ರಿ ಆಗಲು ಒಂದು ಬಾರಿ ವಿರೋಧ ಪಕ್ಷ ನಾಯಕರಾಗಲು ನಾನು ಒಂದು ಬಾರಿ ಶಾಸಕನಾಗಲು ಕಾರಣಕರ್ತರಾಗಿದ್ದೀರಿ, ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ನಾವು ಎಷ್ಟು ಬಾರಿ ಅಭಿನಂದನೆ ಸಲ್ಲಿಸಿದರು ಸಾಲದು ಕ್ಷೇತ್ರದ ಜನತೆಯ ಋಣ ನಮ್ಮ ಮೇಲಿದೆ ಕ್ಷೇತ್ರದ ಎಲ್ಲಾ ವರ್ಗದ ಬಡವರ ಹಿಂದುಳಿದ ವರ್ಗದವರ ಕಾರ್ಮಿಕರು ರೈತರು ಕೂಲಿ ಕಾರ್ಮಿಕರ ಪರವಾಗಿ ಕೆಲಸ ಮಾಡುವ ಮೂಲಕ ನಿಮ್ಮ ಋಣ ಭಾರವನ್ನು ನಾವು ಕಡಿಮೆ ಮಾಡಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾವು ಎಷ್ಟೇ ಮಾಡಿದರು ಸಹ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ ಎಂದು ತಿಳಿಸಿದರು.