ಮೈಸೂರು: ಸ್ವಚ್ಛ ನಗರಕ್ಕಾಗಿ ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಹೆಚ್ಚುವರಿ ಪೌರ ಕಾರ್ಮಿಕರ ನೇಮಕಾತಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಇತ್ತೀಚೆಗೆ ಇಂದೋರ್‌ಗೆ ಅಧಯನ ಪ್ರವಾಸ ಕೈಗೊಂಡಿದ್ದ ಮೈಸೂರು ಪಾಲಿಕೆ ತಂಡ ಅಲ್ಲಿರುವ ಯೋಜನೆಗಳ ಅನುಷ್ಠಾನ ಸಂಬಂಧ ನಗರ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ದೇಶದ ನಂ.೧ ಸ್ವಚ್ಛ ನಗರಿ ಇಂದೋರ್ ಮಾದರಿಯಲ್ಲಿ ನಗರದಲ್ಲಿ ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಹೆಚ್ಚುವರಿ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ಇಂದೋರ್ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದ್ದು, ಎಲ್ಲೂ ಸಹ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ಕಾಣಲು ಸಾಧವಿಲ್ಲ. ಪೌರ ಕಾರ್ಮಿಕರು ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿzರೆ. ಮನೆ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ತಂಡ ರಚಿಸಲಾಗಿದೆ. ಅದೇ ರೀತಿ ಕಮರ್ಷಿಯಲ್ ಸ್ಟ್ರೀಟ್, ಕೈಗಾರಿಕೆಗಳಿಂದ ಪ್ರತ್ಯೇಕವಾಗಿ ತ್ಯಾಜ್ಯ ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ತ್ಯಾಜ್ಯ ಸಂಗ್ರಹಿಸುವ ಪ್ರತಿಯೊಂದು ವಾಹನಗಳನ್ನು ವೆಬ್ಬೇ ಮಾನಿಟರಿಂಗ್ ಸಿಸ್ಟಮ್ ಮೂಲಕ ನಿಯಂತ್ರಿಸಲಾಗುತ್ತದೆ. ವಾಹನಗಳು ನಿಗದಿತ ಸ್ಥಳಕ್ಕೆ ನಿಗದಿತ ಸಮಯಕ್ಕೆ ತಲುಪದೆ ಇದ್ದರೆ ತPಣ ಚಾಲಕನಿಗೆ ಕರೆ ಮಾಡಿ ವಿಳಂಬಕ್ಕೆ ಕಾರಣ ತಿಳಿದುಕೊಳ್ಳಲಾಗುತ್ತದೆ. ನಗರದ ಎಲ್ಲೂ ತ್ಯಾಜ್ಯ ಕಾಣಲು ಸಾಧವಿಲ್ಲ. ಜನರಲ್ಲಿ ಅರಿವು ಮೂಡಿಸುವಲ್ಲಿ ಅಲ್ಲಿನ ಪಾಲಿಕೆ ಯಶಸ್ವಿಯಾಗಿದೆ ಎಂದರು.
ಇಂದೋರ್ ನಗರ ಹಸಿ ತ್ಯಾಜ್ಯದಿಂದ ಬಯೋ ಗ್ಯಾಸ್ ತಯಾರಿಸುತ್ತಿದೆ. ಈ ಬಯೋಗ್ಯಾಸ್ ಘಟಕವನ್ನು ಖಾಸಗಿ ಸಂಸ್ಥೆಗೆ ವಹಿಸಿದ್ದು, ಕಂಪನಿ ನಗರ ಪಾಲಿಕೆಗೆ ವಾರ್ಷಿಕ ೨.೫೦ ಕೋಟಿ ರೂ. ನೀಡುತ್ತಿದೆ. ಈ ಬಯೋಗ್ಯಾಸ್‌ನ್ನು ಇಂದೋರ್‌ನ ಸರ್ಕಾರಿ ಸಿಎನ್‌ಜಿ ಬಸ್‌ಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಒಣ ಕಸಕ್ಕೆ ಪ್ರತ್ಯೇಕ ಪ್ಲಾಂಟ್ ಅಳವಡಿಸಲಾಗಿದೆ. ಒಟ್ಟು ೫ ಕಡೆಗಳಲ್ಲಿ ಕಟ್ಟಡ ತ್ಯಾಜ್ಯಗಳನ್ನು (ಡೆಬ್ರಿಸ್) ವಿಲೇವಾರಿ ಮಾಡಲು ಜಾಗ ಒದಗಿಸಲಾಗಿದೆ ಎಂದು ಹೇಳಿದರು.
ಇಂದೋರ್ ಮಹಾನಗರ ಪಾಲಿಕೆ ಸ್ವಚ್ಛತೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳು, ನೂತನ ಯೋಜನೆಗಳ ಕುರಿತು ಅಧಯನ ನಡೆಸಿzವೆ. ನಮ್ಮಲ್ಲೂ ಇಂದೋರ್ ಮಾದರಿಯ ಉತ್ತಮ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ. ಇದಕ್ಕೆ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಾತಿಯ ಅವಶ್ಯಕತೆ ಇದ್ದು, ಮೈಸೂರು ನಗರವನ್ನು ವಿಶೇಷವಾಗಿ ಪರಿಗಣಿಸಿ ಹೆಚ್ಚುವರಿ ಪೌರ ಕಾರ್ಮಿಕರ ನೇಮಕಾತಿಗೆ ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡುವ ಜತೆಗೆ ಸ್ವಚ್ಛತೆಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದರು.
ಪಾಲಿಕೆ ಸದಸ್ಯ ಮಾ.ವಿ. ರಾಮಪ್ರಸಾದ್ ಮಾತನಾಡಿ, ಇಂದೋರ್ ನಗರದಲ್ಲಿ ಎಂದರಲ್ಲಿ ತ್ಯಾಜ್ಯ ಎಸೆದರೆ ದಂಡ ವಿಧಿಸಲಾಗುತ್ತದೆ. ಇಂದೋರ್‌ನಂತೆ ನಮ್ಮಲ್ಲೂ ಕಾನೂನು ಇದ್ದರೂ ಜಾರಿಯಾಗುತ್ತಿಲ್ಲ. ಇಂದೋರ್ ನಗರದ ಸೌಂದರೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ನಮ್ಮಲ್ಲೂ ಆ ಮಾದರಿಯ ವ್ಯವಸ್ಥೆ ಸೃಷ್ಟಿಸಲು ಶ್ರಮಿಸೋಣ ಎಂದರು.
ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಮಾತನಾಡಿ, ನಗರದಲ್ಲಿ ಮನೆ ಮನೆಗಳಿಂದ ಪ್ರತಿನಿತ್ಯ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಆದರೆ, ಬಹುತೇಕ ಕಡೆಗಳಲ್ಲಿ ಹಸಿಕಸ ಹಾಗೂ ಒಣಕಸವನ್ನು ಬೇರ್ಪಡಿಸಿ ನೀಡುತ್ತಿಲ್ಲ. ಮನೆಯವರು ಬೇರ್ಪಡಿಸಿ ನೀಡಿದರೂ ಪೌರ ಕಾರ್ಮಿಕರು ಎರಡೂ ಕಸವನ್ನು ಒಂದೇ ವಾಹನದಲ್ಲಿ ತುಂಬಿಕೊಂಡು ಹೋಗುತ್ತಾರೆ. ಕಸವನ್ನು ಮೂಲದ ಬೇರ್ಪಡಿಸಲು ಕಟ್ಟುನಿಟ್ಟಿನ ಕ್ರಮ ವಹಿಸುವ ಅವಶ್ಯಕತೆ ಇದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಮಾಜಿ ಮೇಯರ್ ಅಯೂಬ್ ಖಾನ್, ಆರಿ ಹುಸೇನ್, ಮಾಜಿ ಉಪ ಮೇಯರ್ ಶಾಂತಕುಮಾರಿ, ಉಪ ಆಯುಕ್ತ ಮಹೇಶ್, ಆರೋಗ್ಯಾಧಿಕಾರಿ ಡಾ.ಡಿ.ಜಿ. ನಾಗರಾಜ್ ಹಾಗೂ ಇತರರು ಇದ್ದರು.
ಬೇಕಿದ್ದಾರೆ ೪ ಸಾವಿರ ಪೌರಕಾರ್ಮಿಕರು
ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಹೆಚ್ಚುವರಿ ಪೌರಕಾರ್ಮಿರ ನೇಮಕ ಸಂಬಂಧ ಮಾತನಾಡಿ, ಇಂದೋರ್ ನಗರ ೩೨ ಲP ಜನಸಂಖ್ಯೆ ಹೊಂದಿದ್ದು, ೧೦ ಸಾವಿರ ಪೌರ ಕಾರ್ಮಿಕರು ಇzರೆ. ನಮ್ಮಲ್ಲಿ ೧೪ ಲP ಜನಸಂಖ್ಯೆ ಇದ್ದು, ೨,೨೦೦ ಪೌರ ಕಾರ್ಮಿಕರು ಇzರೆ. ಇಂದೋರ್ ಮಾದರಿಯಲ್ಲಿ ಎರಡು ಪಾಳಿಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕಾದರೆ ೪೦೦೦ಕ್ಕೂ ಹೆಚ್ಚು ಪೌರ ಕಾರ್ಮಿಕರ ಅವಶ್ಯಕತೆ ಇದೆ. ಇದಕ್ಕೆ ಹೆಚ್ಚುವರಿಯಾಗಿ ೫ ಕೋಟಿ ರೂ. ಅವಶ್ಯಕತೆ ಇದೆ ಎಂದು ಹೇಳಿದರು.