Monday, April 21, 2025
Google search engine

Homeರಾಜ್ಯಆಸ್ತಿ ತೆರಿಗೆ ಪಾವತಿಗೆ ಜು.31 ಕೊನೇ ದಿನ, ಅವಧಿ ವಿಸ್ತರಣೆಯಿಲ್ಲ: ಡಿಸಿಎಂ

ಆಸ್ತಿ ತೆರಿಗೆ ಪಾವತಿಗೆ ಜು.31 ಕೊನೇ ದಿನ, ಅವಧಿ ವಿಸ್ತರಣೆಯಿಲ್ಲ: ಡಿಸಿಎಂ

ಬೆಂಗಳೂರು: ಯಾವುದೇ ಕಾರಣಕ್ಕೂ ಬೆಂಗಳೂರಲ್ಲಿ ಆಸ್ತಿ ತೆರಿಗೆ ಪಾವತಿಗೆ ಕೊನೆಯ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ. ಜುಲೈ.೩೧ ಕೊನೆಯ ದಿನವಾಗಿದೆ. ಅದರೊಳೆಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಅವರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರಿನ ಜನರ ಸೇವೆಗೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿದೆ. ನಗರ ಪಾಲಿಕೆಯು ರಸ್ತೆಗಳು, ಉದ್ಯಾನವನಗಳು ಮತ್ತು ಇತರ ಸಾರ್ವಜನಿಕ ಉಪಯುಕ್ತತೆಗಳ ನಿರ್ವಹಣೆ, ಆಸ್ತಿ ಮತ್ತು ಖಾತಾ ಸಂಬಂಧಿತ ಸೇವೆಗಳು, ಘನತ್ಯಾಜ್ಯ ನಿರ್ವಹಣೆ ಮುಂತಾದ ಸೇವೆಗಳ ಸಮರ್ಥ ವಿತರಣೆಯು ಬೆಂಗಳೂರಿಗರಿಗೆ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ನಿರ್ಣಾಯಕವಾಗಿದೆ ಎಂದು ಅರ್ಥಮಾಡಿ ಕೊಂಡಿದೆ ಎಂದಿದ್ದಾರೆ.

ಆಸ್ತಿ ತೆರಿಗೆಯು ಬಿಬಿಎಂಪಿಯ ಆದಾಯದ ಪ್ರಾಥಮಿಕ ಮೂಲವಾಗಿದೆ. ಇದು ನಮ್ಮ ನಗರದ ಕಾರ್ಯಾಚರಣೆಯನ್ನು ನೇರವಾಗಿ ಸಮರ್ಥಿಸುತ್ತದೆ. ಸುಮಾರು ೪ ಲಕ್ಷ ನಾಗರಿಕರಿಂದ ಸುಮಾರು ರೂ. ೧೦೦೦ ಕೋಟಿಗಳಷ್ಟು ತಮ್ಮ ಆಸ್ತಿತೆರಿಗೆಯನ್ನು ಪಾವತಿಸಿರುವುದಿಲ್ಲ ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರದ ಐತಿಹಾಸಿಕ ನಿರ್ಣಯದಿಂದ, ಒಂದು ಭಾರಿ ಪರಿಹಾರ ಯೋಜನೆಯನ್ನು [OTS] ಪರಿಚಯಿಸಿದೆ, ಇದರ ಅಡಿಯಲ್ಲಿ ಆಸ್ತಿ ತೆರಿಗೆಯ ಬಾಕಿಯ ಮೇಲೆ ಪಾವತಿಸಬೇಕಾದ ಬಡ್ತಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ ಮತ್ತು ದಂಡವನ್ನು ಅರ್ಧಕ್ಕೆ ಇಳಿಸಲಾಗಿದೆ. OTS ನ ಈ ಸುವರ್ಣಾವಕಾಶವು ೩೧ನೇ ಜುಲೈ ೨೦೨೪ ರಂದು ಕೊನೆಗೊಳ್ಳಲಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಈ ಯೋಜನೆಯ ಅವಕಾಶವಿದ್ದು, ಇದರ ವಿಸ್ತರಣೆ ಇರುವುದಿಲ್ಲ. ಇಲ್ಲಿಯವರೆಗೆ ೪ ಲಕ್ಷ ಸುಸ್ತಿ ರರು ಸುಮಾರು ೫೦೦೦೦ ಜನರು ಮಾತ್ರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ನಿಮ್ಮ ಸ್ವತ್ತಿನ ಬಾಕಿ ಆಸ್ತಿತೆರಿಗೆಯನ್ನು ಪಾವತಿಸಲು ಮತ್ತು ಪುಚಲಿತ ಪವೃತ್ತಿಗೆ ಸೇರಲು ನಾನು ಎಲ್ಲರಿಗೂ ಕರೆ ನೀಡಿ ವಿನಂತಿಸಿದ್ದಾರೆ.

ನಾಗರಿಕರು ಆನ್‌ಲೈನ್ ಮೂಲಕ ಆಸ್ತಿತೆರಿಗೆಯನ್ನು ಸುಲಭವಾಗಿ ಪಾವತಿಸಲು ಲಿಂಕ್ https:// bbmptax.karnataka.gov.in ಅನ್ನು ಬಳಸಬಹುದು. ಆನ್‌ಲೈನ್ ಪೋರ್ಟಲ್‌ನಲ್ಲಿ OTS ಪ್ರಕಾರ ಆಸ್ತಿ ತೆರಿಗೆ ಬಾಕಿಗಳನ್ನು ಈಗಾಗಲೇ ಕಡಿಮೆ ಮಾಡಲಾಗಿದೆ ಮತ್ತು ೧ನೇ ಆಗಸ್ಟ್ ೨೦೨೪ ರಿಂದ ಹೆಚ್ಚಾಗಲಿದೆ ಎಂಬುದನ್ನು ದಯವಿಟ್ಟು ಗಮನಿಸಿ ಎಂದು ತಿಳಿಸಿದ್ದಾರೆ.

ಯಾವುದೇ ಸೃಷ್ಟಿಕರಣಗಳು ಅಥವಾ ಮಾಹಿತಿಯ ಅಗತ್ಯವಿದ್ದಲ್ಲಿ, ದಯವಿಟ್ಟು ನಮ್ಮ ಸಹಾಯ ಸಹಾಯವಾಣಿ ೧೫೩೩ ಗೆ ಕರೆ ಮಾಡಲು ಹಿಂಜರಿಯಬೇಡಿ ಅಥವಾ ನಮ್ಮ ಸ್ಥಳೀಯ ಅಸಿಸ್ಟಂಟ್ ರೆವೆನ್ಯೂ ಆಫೀಸರ್ (ARO) ಕಚೇರಿಗಳನ್ನು ಸಂಪರ್ಕಿಸಿ ಎಂದು ಮಾಹಿತಿ ನೀಡಿದ್ದಾರೆ.

RELATED ARTICLES
- Advertisment -
Google search engine

Most Popular