ನವದೆಹಲಿ: ಬಿಜೆಪಿ ನಾಯಕ ಅಮಿತ್ ಶಾ ಅವರು ಇಂದು ಮಂಗಳವಾರ ಎರಡನೇ ಬಾರಿಗೆ ಕೇಂದ್ರ ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ದೆಹಲಿಯಲ್ಲಿರುವ ರಾಷ್ಟ್ರೀಯ ಪೊಲೀಸ್ ಸ್ಮಾರಕಕ್ಕೆ ಭೇಟಿ ನೀಡಿದ್ದ ಅವರು, ದೇಶದ ಸೇವೆಗಾಗಿ ಹುತಾತ್ಮರಾಗಿದ್ದ ಪೊಲೀಸರಿಗೆ ಗೌರವ ಸಲ್ಲಿಸಿದರು.
ಮೋದಿ ಅವರ ಅತ್ಯಂತ ಆತ್ಮೀಯರಾಗಿರುವ ೫೯ ವರ್ಷದ ಅಮಿತ್ ಶಾ, ಸತತ ಎರಡನೇ ಬಾರಿಗೆ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ೨೦೧೯ರಿಂದಲೂ ಗೃಹ ಖಾತೆ ನಿಭಾಯಿಸಿದ್ದಾರೆ. ೨೦೧೪ರಿಂದ ೨೦೨೦ರ ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.