Monday, April 21, 2025
Google search engine

Homeಸಿನಿಮಾಕೊಲೆ ಆರೋಪದಲ್ಲಿ ದರ್ಶನ್‌ಗೆ ಜೈಲು: ಆತಂಕದಲ್ಲಿ ನಿರ್ಮಾಪಕರು

ಕೊಲೆ ಆರೋಪದಲ್ಲಿ ದರ್ಶನ್‌ಗೆ ಜೈಲು: ಆತಂಕದಲ್ಲಿ ನಿರ್ಮಾಪಕರು

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಬಂಧನವಾಗಿದೆ. ದರ್ಶನ್ ವಿರುದ್ಧ ಪೊಲೀಸರು ಕಲೆಹಾಕಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದರೆ ದರ್ಶನ್ ಗೆ ಸುಲಭಕ್ಕೆ ಜಾಮೀನು ಸಿಗುವುದು ಅನುಮಾನ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಿನಿಮಾ ನಿರ್ಮಾಪಕರು ಈ ಪ್ರಕರಣದಿಂದಾಗಿ ತೀವ್ರ ಆತಂಕದಲ್ಲಿದ್ದಾರೆ.

ದರ್ಶನ್ ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಅವರನ್ನು ನಂಬಿ ಕೋಟ್ಯಂತರ ರೂಪಾಯಿ ಬಂಡವಾಳವನ್ನು ಸಿನಿಮಾ ನಿರ್ಮಾಪಕರು ಹಾಕಿದ್ದಾರೆ. ಈಗ ದರ್ಶನ್ ಜೈಲು ಪಾಲಾಗಿದ್ದರಿಂದ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ದರ್ಶನ್ ಪ್ರಸ್ತುತ ಡೆವಿಲ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಅರ್ಧ ಮುಗಿದಿದೆ. ಈ ಮಧ್ಯೆ ದರ್ಶನ್ ಬಂಧನವಾಗಿದ್ದು, ಪಾಪ ಡೆವಿಲ್ ನಿರ್ಮಾಪಕರಿಗೆ ದಿಕ್ಕು ತೋಚದಂತಾಗಿದೆ. ನಿರ್ಮಾಪಕ ಸೂರಪ್ಪ ಬಾಬು ಜೊತೆಗೂ ಒಂದು ಸಿನಿಮಾಕ್ಕಾಗಿ ದರ್ಶನ್ ಎಸ್ ಹೇಳಿದ್ದರು. ಸೂರಪ್ಪ ಬಾಬು ಸಹ ದರ್ಶನ್ ಜೊತೆ ಸಿನಿಮಾ ಮಾಡಲು ಹಣಕಾಸಿನ ಹೊಂದಾಣಿಕೆಯಲ್ಲಿ ತೊಡಗಿದ್ದರು ಎನ್ನಲಾಗುತ್ತಿದೆ. ಈಗ ಈ ಸಿನಿಮಾ ಸಹ ಬಂದ್ ಆಗಲಿದೆ.

RELATED ARTICLES
- Advertisment -
Google search engine

Most Popular