Sunday, April 20, 2025
Google search engine

Homeರಾಜಕೀಯರಾಜ್ಯದಲ್ಲಿ ತಾಲಿಬಾನ್ ಮಾದರಿ ಸರಕಾರ: ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ

ರಾಜ್ಯದಲ್ಲಿ ತಾಲಿಬಾನ್ ಮಾದರಿ ಸರಕಾರ: ವಿಪಕ್ಷ ನಾಯಕ ಆರ್ ಅಶೋಕ್ ಕಿಡಿ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ತಾಲಿಬಾನ್ ಮಾದರಿಯ ಆಡಳಿತ ನಡೆಸುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಕಿಡಿಕಾರಿದ್ದಾರೆ.

ಚೂರಿ ಇರಿತಕ್ಕೊಳಗಾದವರ ಆರೋಗ್ಯ ವಿಚಾರಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಭಾರತ್ ಮಾತಾ ಕಿ ಜೈ ಬಿಟ್ಡು ಬೇರೇನು ಘೋಷಣೆ ಹಾಕಿಲ್ಲ. ಹಾಕಿದ್ದರೆ ಪೊಲೀಸರು ದಾಖಲೆ ನೀಡಲಿ ಎಂದು ಅಶೋಕ್ ಹೇಳಿದರು.

ಮುಖ್ಯವಾಗಿ ಕರಾವಳಿ ಭಾಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ‌ ನಿರಂತರವಾಗಿ ಹಲ್ಲೆ ನಡೆಯುತ್ತಿದೆ. ಬೋಳಿಯಾರ್ ನಲ್ಲಿ ಭಾರತ್ ಮಾತಾ ಕಿ ಜೈ ಹೇಳಿದ ಬಿಜೆಪಿ ಕಾರ್ಯಕರ್ತರಿಗೆ ಡ್ರ್ಯಾಗನ್ ನಿಂದ‌ ಇರಿದು ಕೊಲೆಗೆ ಯತ್ನಿಸಲಾಗಿದೆ. ಇದು ಪೂರ್ವ ಯೋಜಿತ ಕೃತ್ಯ ಎಂದರು.

ನಾಳೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ವಿಧಾನ ಸಭೆಯಲ್ಲಿ ಹೋರಾಟ ನಡೆಯಲಿದೆ ಎಂದರು.

ಗಾಯಾಳುಗಳಿಗೆ ಜಿಲ್ಲಾಡಳಿತ ಚಿಕಿತ್ಸೆಯ ವೆಚ್ಚ ನೀಡಬೇಕು. ಅಮಾಯಕ ಹಿಂದೂ ಕಾರ್ಯಕರ್ತರ ಮೇಲೆ ಹಾಕಲಾದ ಕೇಸನ್ನು ವಾಪಸ್ ಪಡೆಯಬೇಕು. ಪಕ್ಷದಿಂದಲೂ ನೆರವು ನೀಡಲಾಗುವುದು. ಬಿಜೆಪಿ ಕಾರ್ಯಕರ್ತರು ಹೆದರಬೇಕಾಗಿಲ್ಲ. ಅವರ ಜತೆ ಪಕ್ಷ ನಿಲ್ಲುತ್ತದೆ. ರಾಜ್ಯ ಕಾಂಗ್ರೆಸ್ ನ ಸಾಧನೆ ಕಳೆದ ಒಂದು ವರ್ಷದಲ್ಲಿ ಶೂನ್ಯ.‌ಇದು ಲೋಕಸಭೆ ಚುನಾವಣೆಯಲ್ಲಿ ಸಾಬೀತಾಗಿದೆ ಎಂದರು.

ಬಿಬಿಎಂಪಿ, ತಾ.ಪಂ ಜಿ.ಪಂ ಚುನಾವಣೆಗೂ ಜೆಡಿಎಸ್ ಜತೆಗಿನ ಮೈತ್ರಿ ಮುಂದುವರಿಯಲಿದೆ ಎಂದರು.

RELATED ARTICLES
- Advertisment -
Google search engine

Most Popular