ಮಂಗಳೂರು (ದಕ್ಷಿಣ ಕನ್ನಡ): ಬೊಳಿಯಾರ್ ನಲ್ಲಿ ವಿಜಯೋತ್ಸವದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಪೊಲೀಸರು ರಾಜಕೀಯ ಒತ್ತಡ ಗಳ ಪ್ರಕಾರ ಕೆಲಸ ಮಾಡಬಾರದು ಎಂದು ನೂತನ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ. ಅವ್ರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ ತಕ್ಷಣ ಕಿಸಾನ್ ಸಮ್ಮಾನ್ ಹಾಗೂ ಪ್ರಧಾನ ಮಂತ್ರಿ ಅವಾಝ್ ಯೋಜನೆಯ ಫಲಾಭವಿಗಳಿಗೆ ಅನುದಾನ ಮಾಡಿರುವುದು ಕ್ರಾಂತಿ ಕಾರಿ ನಿರ್ಣಯವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಿರಿಯರ ಮಾರ್ಗದರ್ಶನ ದೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸುವುದಾಗಿ ಬ್ರಿಜೇಶ್ ಚೌಟ ತಿಳಿಸಿದ್ದಾರೆ.