ಮಂಡ್ಯ: ಚಿತ್ರನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನ ವಿಚಾರ ಕುರಿತು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪ್ರತಿಕ್ರಿಯಿಸಿದ್ದಾರೆ.
ಈ ಪ್ರಕರಣದಲ್ಲಿ ದರ್ಶನ್ ಬಂಧನ ನಿಜಕ್ಕೂ ನನಗೆ ಆಘಾತ ಉಂಟುಮಾಡಿದೆ. ಈಗಾಗಲೇ ನಟ ದರ್ಶನ್ ರನ್ನು ಬಂಧಿಸಿದ್ದಾರೆ. ನ್ಯಾಯಾಲಯದ ತೀರ್ಪಿಗೆ ನಾವೆಲ್ಲ ತಲೆ ಬಾಗಲೇಬೇಕು ಎಂದು ಹೇಳಿದರು.
ನನಗೆ ಅವರು ಕೊಲೆ ಮಾಡಿಲ್ಲ ಎಂಬ ಭರವಸೆ ಇದೆ. ಅದು ಪ್ರೂವ್ ಆಗಬಹುದೋ ಏನೋ ನನಗೆ ಗೊತ್ತಿಲ್ಲ. ಅವರು ಆ ತರ ಮಾಡಿಲ್ಲ. ಅಂದರೆ ಪ್ರೂವ್ ಆದರೆ ಒಳ್ಳೆಯದು. ನಟ ದರ್ಶನ್ ಈ ಹಿಂದೆಯೂ ನನ್ನ ಸ್ನೇಹಿತರು ಮುಂದೆಯೂ ನನ್ನ ಸ್ನೇಹಿತರು ಎಂದು ಹೇಳಿದರು.