Sunday, April 20, 2025
Google search engine

Homeರಾಜ್ಯಬೀದರ ವಾರ್ತಾಧಿಕಾರಿ ಸುರೇಶ ಜಿ. ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

ಬೀದರ ವಾರ್ತಾಧಿಕಾರಿ ಸುರೇಶ ಜಿ. ರವರಿಗೆ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ

ಬೀದರ: ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಸುರೇಶ ಜಿ. ರವರಿಗೆ ಡಾಕ್ಟರೇಟ್ ಪದವಿ ನೀಡಿದೆ. ಸುರೇಶ ಅವರು ಗುಲಬರ್ಗಾ ವಿಶ್ವವಿದ್ಯಾಲಯ ಮನೋವಿಜ್ಞಾನ ವಿಭಾಗದಲ್ಲಿ ”ದಿ ಇಂಪ್ಯಾಕ್ಟ ಆಫ್ ಡಿಪ್ರವೇಶನ್ ಆ್ಯಂಡ್ ಯೂತ್ ಪ್ರಾಬ್ಲಮ್ಸ ಆನ್ ಅಚಿವಮೆಂಟ ಮೋಟಿವೇಶನ್ ಸೆಲ್ಪ್ ಕಾನ್ಸೆಪ್ಟ ಆ್ಯಂಡ್ ಅಕಾಡೆಮಿಕ್ ಅಚಿವಮೆಂಟ್” ಎಂಬ ಸಂಶೋಧನಾ ಪ್ರಬಂಧವನ್ನು ಕಲಬುರಗಿಯ ಶರಣಬಸವೇಶ್ವರ ಕಾಲೇಜಿನ ಮನೋವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕರಾಗಿದ್ದ ಡಾ. ಆರ್. ವೆಂಕಟರೆಡ್ಡಿ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದರು. ಈ ಸಂಶೋಧನಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಡಾಕ್ಟರೇಟ್ ಪದವಿ ನೀಡಿದೆ.

ಸುರೇಶ ತಂದೆ ಗುಂಡಪ್ಪ ಗುತ್ತೆದಾರ ಇವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಾಲಗಡ್ಲಾ ಗ್ರಾಮದವರಾಗಿದ್ದು. ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿಯ ಮನೋವಿಜ್ಞಾನ ವಿಭಾಗದಲ್ಲಿ ಅರೆಕಾಲಿಕ ಸಂಶೋಧನಾ ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿದ್ದರು. ಪ್ರಸ್ತುತ ಇವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೀದರನಲ್ಲಿ ಸಹಾಯಕ ನಿರ್ದೆಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಇವರ ಸಾಧನೆಗೆ ಅವರ ಅಧಿಕಾರಿ ವೃಂದ, ಗುರು ವೃಂದ ಹಾಗೂ ಕುಟುಂಬದ ಸದಸ್ಯರು ಮತ್ತು ಸಹಪಾಠಿ ಮಿತ್ರರು ಹರ್ಷವನ್ನು ವ್ಯಕ್ತಪಡಿಸಿರುತ್ತಾರೆ.

RELATED ARTICLES
- Advertisment -
Google search engine

Most Popular