Monday, April 21, 2025
Google search engine

Homeರಾಜ್ಯಮೈಸೂರು ಸಂಸ್ಥಾನವು ನಾಲ್ವಡಿ ಅವರ ಅವಧಿಯಲ್ಲಿ ತಾಂತ್ರಿಕ ಬೆಳವಣಿಗೆ: ಡಾ.ಡಿ.ನಟರಾಜು

ಮೈಸೂರು ಸಂಸ್ಥಾನವು ನಾಲ್ವಡಿ ಅವರ ಅವಧಿಯಲ್ಲಿ ತಾಂತ್ರಿಕ ಬೆಳವಣಿಗೆ: ಡಾ.ಡಿ.ನಟರಾಜು

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ :   ನಾಲ್ವಡಿ ಕೃಷ್ಣರಾಜ ಒಡೆಯರ್  ಅವರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಗಣನೀಯ ಪ್ರಗತಿ ಸಾಧಿಸಿದ ಮೈಸೂರು ಸಂಸ್ಥಾನವು ನಾಲ್ವಡಿ ಅವರ ಅವಧಿಯಲ್ಲಿ ತಾಂತ್ರಿಕವಾಗಿಯೂ ಬೆಳವಣಿಗೆ ಕಂಡಿತು. ವಿದ್ಯುತ್ ತಂದಿದ್ದು ಅವರ ದೊಡ್ಡ ಕೊಡುಗೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜು  ಹೇಳಿದರು.

ಪಟ್ಟಣದ ತಾಲೂಕು ಪಂಚಾಯತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಆರೋಗ್ಯ ಇಲಾಖೆಯ ಸಾಮಾನ್ಯ ಸಭೆಗೂ ಮೊದಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿ ಅಂಗವಾಗಿ ನಾಲ್ವಡಿ ಅವರ ಬಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.

ನಾಲ್ವಡಿಯವರ ಜೀವನ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಪ್ರತಿ ಕ್ಷಣವೂ ಅವರು ಸವಾಲುಗಳನ್ನು ಎದುರಿಸಿ, ಬೆಂಕಿಯಲ್ಲಿ ಅರಳಿದ ಹೂವಾಗಿ ಹೊರಹೊಮ್ಮಿದರು. ತಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು, ನಾಡಿನ ಭವಿಷ್ಯವನ್ನು ಉಜ್ವಲವಾಗಿಸಿದರು’ ಎಂದು ತಿಳಿಸಿದರು. ‌‌

ನಾಲ್ವಡಿಯವರ ಜೀವನ ಸುಖದ ಸುಪ್ಪತ್ತಿಗೆಯಾಗಿರಲಿಲ್ಲ. ಪ್ರತಿ ಕ್ಷಣವೂ ಅವರು ಸವಾಲುಗಳನ್ನು ಎದುರಿಸಿ, ಬೆಂಕಿಯಲ್ಲಿ ಅರಳಿದ ಹೂವಾಗಿ ಹೊರಹೊಮ್ಮಿದರು. ತಮ್ಮನ್ನೇ ಗಂಧದ ಹಾಗೆ ತೇಯ್ದುಕೊಂಡು, ನಾಡಿನ ಭವಿಷ್ಯವನ್ನು ಉಜ್ವಲವಾಗಿಸಿದರು’ ಎಂದು ತಿಳಿಸಿದರು. ‌‌

ಕೆ.ಆರ್.ನಗರವನ್ನು ಬಹಳ ವಿಶೇಷವಾಗಿ ಸುಂದರ‌ ನಗರ ಕಟ್ಟಿ, ಸರ್ವೋಚ್ಚ ಅಭಿವೃದ್ಧಿ ಮಾಡಿದಲ್ಲದೆ, ದುಡಿವ ರೈತರಿಗೆ ನೀರಾವರಿ ಯೋಜನೆ ರೂಪಿಸಿ ಸಮಗ್ರ ನೀರಾವರಿ ಪ್ರದೇಶ ಮಾಡಿ ಭತ್ತದನಾಡು ಕೃಷ್ಣರಾಜನಗರ ಎಂದೇ ಪ್ರಖ್ಯಾತಿ ಪಡೆಯಲು ಕಾರಣ ಕರ್ತರಾದವರು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನಡೆದು ಬಂದ ಬಗ್ಗೆ ವಿವರಿಸಿದರು.

ಡಾ.ಉಮಾ, ಡಾ.ಮಧುಸೂದನ್, ಡಾ.ಸವಿತಾ, ಡಾ.ರವಿಚಂದ್ರನ್, ಡಾ.ವೀರಕುಮಾರ್ ರೆಡ್ಡಿ, ಡಾ.ದೇವಿಕಾ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಮಹೇಶ್, ಆರೋಗ್ಯ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಆರೋಗ್ಯ ಸುರಕ್ಷಣಾಧಕಾರಿ ಪಾರ್ವತಿ, RBSK ತಂಡದ ವೈದ್ಯರಾದ ಡಾ. ರೇವಣ್ಣ ಡಾ.ದಿನೇಶ್ ಇದ್ದರು.

RELATED ARTICLES
- Advertisment -
Google search engine

Most Popular