ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಹೇಳದಿರಲು ಡೀಲ್ ಮಾಡಲಾಗಿದ್ದ ೩೦ ಲಕ್ಷ ರೂ. ಹಣವನ್ನು ಪೊಲೀಸರು ಸೀಜ್ ಮಾಡಿದ್ದಾರೆ.
ದರ್ಶನ್ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ ೩೦ ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಲು, ಮೃತದೇಹ ಸಾಗಿಸಲು ಮತ್ತು ನಟ ದರ್ಶನ್ ಹೆಸರನ್ನು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ ೩೦ ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು.
ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು ೫ ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.