ಹುಣಸೂರು: ಚಿಕಿತ್ಸೆಗೆ ಬಂದ ರೋಗಿ ಮತ್ತು ಸಂಬಂಧಿಕರ ಮೇಲೆ ಹಲ್ಲೆಗೆ ಕಾವೇರಿ ಆಸ್ಪತ್ರೆಯ ವೈದ್ಯರು ಮುಂದಾಗಿದ್ದಾರೆ ಎಂದು ದೂರು ದಾಖಲಾಗಿದೆ.
ತಾಲೂಕಿನ ಕಾಮಗೌಡನ ಹಳ್ಳಿ ಗ್ರಾಮದ ಚಂದ್ರಪ್ಪ ಎಂಬುವವರಿಗೆ ಬೈಕಿನಲ್ಲಿ ತೆರಳುವಾಗ 12.06.24 ರ ಬುಧವಾರ ಕಲ್ಕುಣಿಕೆ ಗ್ರಾಮದಲ್ಲಿ ಅಪಘಾತವಾಗಿತ್ತು, ಅವರಿಗೆ ತೀವ್ರಾವಾಗಿ ಗಾಯಗೊಂಡಿದ್ದರಿಂದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿತ್ತು. ಆದರೆ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಲಾಯಿತು. ಈ ಸಂದರ್ಭದಲ್ಲಿ ಗಾಯಳುನ್ನು ಕರೆದು ತಂದಿದ್ದ ಆಟೋ ಚಾಲಕ ನಗರದ ಕಾವೇರಿ ಆಸ್ಪತ್ರೆಯಲ್ಲಿ ಪರಿಚಯವಿದ್ದಾರೆ ಎಂದೇಳಿ ಅಲ್ಲಿ ದಾಖಲಿಸಿದ್ದರು.
ಆದರೆ ಅಲ್ಲಿ ನಮ್ಮ ಚಿಕ್ಕಪ್ಪನಿಗೆ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ್ದರು. ನಾವು ವೈದ್ಯ ಡಾ. ಅರ್ಜುನ್ ಅವರನ್ನು ಪ್ರಶ್ನೆ ಮಾಡಿದಾಗ ನಿಮ್ಮ ಚಿಕ್ಕಪ್ಪನಿಗೆ ಚರ್ಮ ಮಾತ್ರ ಕಿತ್ತುತೋಗಿದೆ ತೀವ್ರತರವಾದ ಗಾಯವಾಗಿಲ್ಲವೆಂದು, ನೀವು ಮೈಸೂರಿಗೆ ಕರೆದುಕೊಂಡು ಹೋಗಿ ಎಂ.ಆರ್.ಐ. ಸ್ಕ್ಯಾನ್ ಮಾಡಿಸಿಕೊಂಡು ಬನ್ನಿ ಎಂದು ತಿಳಿಸಿದರು. ನಾವು ಅದೇ ರೀತಿ ಸ್ಕ್ಯಾನ್ ಮಾಡಿಸಿಕೊಂಡು, ವೈದ್ಯರಿಗೆ ತೋರಿಸಿದಾಗ ಚಂದ್ರಪ್ಪನವರಿಗೆ ಜಾಸ್ತಿ ಇಂಜುರ್ ಆಗಿದ್ದನ್ನ ಪ್ರಶ್ನೆ ಮಾಡಿದಾಗ, ಅವರು ತಾಳ್ಮೆಯಿಂದ ವರ್ತಿಸದೇ ಉಡಾಫೆಯಿಂದ ಇವರನ್ನು ಹೊರಹಾಕಿ ಎಂದು ಸಿಬ್ಬಂದಿಗೆ ಸೂಚಿಸಿ ಗುಂಡಾವರ್ತನೆ ತೋರಿದ್ದಾರೆ ಎಂದು ದೂರಿನಲ್ಲಿ ತಿಳಿಸಿದರು.
ಆಗ ನಾವು ನಮಗೆ ನ್ಯಾಯಬೇಕು ಎಂದು ಕೇಳಿದಾಗ ಆಸ್ಪತ್ರೆಯ ಮುಖ್ಯಸ್ಥ ಡಾ.ಲೋಹಿತ್ ಮಧ್ಯಪ್ರವೇಶ ಮಾಡಿ ನಮ್ಮಗಳ ಕತ್ತುಪಟ್ಟಿ ಹಿಡಿದು, ಅವರು ನಡೆಸುತ್ತಿದ್ದ ದೌರ್ಜನ್ಯ ವನ್ನು ರೆಕಾರ್ಡ್ ಮಾಡುತ್ತಿದ್ದ ನಮ್ಮ ಮೊಬೈಲ್ ಕಿತ್ತಿಕೊಂಡು ಹಲ್ಲೆ ಮಾಡಿದ್ದಾರೆ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ನಮಗೆ ನ್ಯಾಯಕೊಡಿಸಬೇಕೆಂದು ಎಂದು ಸಂತೋಷ್ ಕುಮಾರ್ ಮತ್ತು ಚಂದ್ರಪ್ಪ, ರಾಜೇಶ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.