ಮಂಡ್ಯ: ನೆಚ್ಚಿನ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರು ಸಂಸದ ಹಾಗೂ ಕೇಂದ್ರ ಸಚಿವರಾದ ಹಿನ್ನೆಲೆ ಭರ್ಜರಿ ಗಿಫ್ಟ್ ನೀಡಲು ಜೆಡಿಎಸ್ ಮುಖಂಡ ಮುಂದಾಗಿದ್ದಾರೆ.
ಇಂದು ಮಂಡ್ಯಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು, ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದ ಗ್ರಾ.ಪಂ.ಸದಸ್ಯನಾಗಿರುವ ಸಾಯಿ ಪ್ರಸನ್ನ, ಸುಮಾರು 80 ಸಾವಿರ ಬೆಲೆ ಬಾಳುವ ರೋಜ್ ವುಡ್ ಛೇರ್ ನೀಡಲು ಮುಂದಾಗಿದ್ದಾರೆ.

ಮೈಸೂರಿನ ಗೋಸಿ ಗಾಡಿನಲ್ಲಿ ಅತ್ಯುತ್ತಮ ಕೆಲಸಗಾರರಿಂದ ರೋಜ್ ವುಡ್ ಛೇರ್ ಮಾಡಿಸಿದ್ದಾರೆ. ಈ ಛೇರ್ ನಲ್ಲಿ ಗಂಡುಭೇರುಂಡ, ರಾಜ ಲಾಂಛನ, ಆಮೆಯ ಸುಂದರ ಕೆತ್ತನೆ ಕೆಲಸ ಮಾಡಲಾಗಿದೆ.
ಇಂದು ಆಗಮಿಸಲಿರುವ ಹೆಚ್ ಡಿಕೆ ಈ ಉಡುಗೊರೆ ನೀಡಿ ಸನ್ಮಾನಕ್ಕೆ ಗೆಜ್ಜಲಗೆರೆಯಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಹೆಚ್ ಡಿಕೆಗೆ ವಿಶೇಷ ಗಿಫ್ಟ್ ನೀಡಿ ಸಿಹಿ ಹಂಚಿ ಕಾರ್ಯಕರ್ತರು ಸಂಭ್ರಮಿಸಲಿದ್ದಾರೆ.
ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದೆ, ಮುಖ್ಯಮಂತ್ರಿಯಾದರು. ಈ ಬಾರಿ ಎಂಪಿ ಚುನಾವಣೆಯಲ್ಲಿ ಗೆದ್ದು ಕೇಂದ್ರ ಸಚಿವರಾಗಲೆಂದು ಸಾಯಿ ದೇವರಲ್ಲಿ ಹರಕೆ ಹೊತ್ತಿದ್ದೆ. ಇಂದು ಸಂಸದರಾಗಿ ಕೇಂದ್ರ ಸಚಿವರಾಗಿದ್ದಾರೆ. ಈ ವಿಶೇಷ ಛೇರಿನಲ್ಲಿ ಕುಳಿತರೆ ಮುಂದೊಂದು ದಿನ ಈ ದೇಶದ ಪ್ರಧಾನಿಯಾಗುತ್ತಾರೆ ಎಂದು ಹರಕೆ ಮಾಡಿಕೊಂಡಿದ್ದೇನೆ. ಮುಂದೊಂದು ದಿನ ಕುಮಾರಸ್ವಾಮಿ ಪ್ರಧಾನಿ ಆಗುತ್ತಾರೆ ಎಂಬ ನಂಬಿಕೆ ಇದೆ. ದೇವರಲ್ಲಿ ಪ್ರಾರ್ಥಿಸಿದ್ದೇವೆ ಖಂಡಿತವಾಗಿ ಹೆಚ್ಡಿಕೆ ಪ್ರಧಾನಿ ಆಗ್ತಾರೆ ಎಂದ ಪ್ರಸನ್ನ ಹೇಳಿದ್ದಾರೆ.