Sunday, April 20, 2025
Google search engine

Homeಅಪರಾಧಮಂಡ್ಯ: ಮಾದಕ ನಶೆಗಾಗಿ ಬೈಕ್ ನಲ್ಲಿನ ಪೆಟ್ರೋಲ್  ಕಳ್ಳತನಕ್ಕಿಳಿದ ಯುವಕರು

ಮಂಡ್ಯ: ಮಾದಕ ನಶೆಗಾಗಿ ಬೈಕ್ ನಲ್ಲಿನ ಪೆಟ್ರೋಲ್  ಕಳ್ಳತನಕ್ಕಿಳಿದ ಯುವಕರು

ಮಂಡ್ಯ: ಸಕ್ಕರೆನಾಡು ಮಂಡ್ಯದಲ್ಲಿ ಮಾದಕ ವ್ಯಸನಿಗಳ ಹಾವಳಿ ಹೆಚ್ಚಾಗಿದೆ. ಯುವಕರು ಮಾದಕ ನಶೆಗಾಗಿ ಬೈಕ್ ನಲ್ಲಿನ ಪೆಟ್ರೋಲ್  ಕಳ್ಳತನಕ್ಕಿಳಿದಿದ್ದಾರೆ.

 ಮನೆಯ ಮುಂದೆ ಬೈಕ್ ನಿಲ್ಲಿಸುವವರಿಗೆ ಮಾದಕ ವ್ಯಸನಿಗಳು ತಲೆನೋವಾಗಿದ್ದಾರೆ. ಮಂಡ್ಯದ ವಿವಿ  ನಗರದಲ್ಲಿ ಮಾದಕ ವ್ಯಸನಿ ಯುವಕ ಪೆಟ್ರೋಲ್ ಕಳ್ಳತನ ಮಾಡುತ್ತಿರುವ ಕೃತ್ಯ ಸೆರೆಯಾಗಿದೆ.

ಮಾದಕ ನಶೆಗಾಗಿ  ಮನೆಯ ಮುಂದೆ ನಿಲ್ಲಿಸಿದ್ದ  ಬೈಕ್ ನಲ್ಲಿ ಒಂದು ಬಾಟೆಲ್ ಪೆಟ್ರೋಲ್ ಕಳ್ಳತನ ಮಾಡಿದ್ದಾರೆ.  ಇಂತಹ ಹಲವು ವ್ಯಸನಿ ಯುವಕರಿಂದ ಸಮಾಜಕ್ಕೆ ಕಟಂಕ ಕಾದಿದೆ.

ಇಂದು ಪೆಟ್ರೋಲ್  ಕದ್ದು ನಶೆ ಏರಿಸಿಕೊಳ್ಳವವರು ನಾಳೆ ಭಾರೀ ಕಳ್ಳತನಕ್ಕೂ ಸ್ಕೆಚ್ ಹಾಕಬಹುದು.

ಆದ್ದರಿಂದ ಪೊಲೀಸರು ಎಚ್ಚೆತ್ತು ಮದ್ಯ ವ್ಯಸನಿ ಯುವಕರನ್ನು ಪತ್ತೆ ಮಾಡಿ ಬುದ್ದಿ ಕಲಿಸಬೇಕಾಗಿದೆ.

RELATED ARTICLES
- Advertisment -
Google search engine

Most Popular