ಮದ್ದೂರು: ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜನೆ ಮಾಡಿದ ನೂತನ ದಕ್ಷಿಣ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಕೆ. ವಿವೇಕಾನಂದರ ಅಭಿನಂದನಾ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿಎಸ್ ಕಾಳಿರಯ್ಯ ಚಾಲನೆ ನೀಡಿದರು.
ಬಳಿಕ ಮಾತನಾಡಿದ ನೂತನ ವಿಧಾನ ಪರಿಷತ್ ಸದಸ್ಯ ವಿವೇಕಾನಂದ ಗುರುಗಳ ಸೇವೆ ಮಾಡುವ ಅವಕಾಶವನ್ನು ನನಗೆ ಒದಗಿಸಿ ಕೊಟ್ಟಿದ್ದೀರಿ, ನನ್ನನ್ನ ಮೊದಲ ಪ್ರಸ್ತಾವ್ಯದ ಮತದಲ್ಲೇ ಆಯ್ಕೆ ಮಾಡಿ ಹೊಸ ಇತಿಹಾಸವನ್ನು ನಿರ್ಮಿಸಿದ್ದೀರಿ ನಿಮ್ಮೆಲ್ಲರ ಸೇವೆಯನ್ನ ಪ್ರಾಮಾಣಿಕವಾಗಿ ಮಾಡುತ್ತೇನೆ.
ಸತತ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಈ ಹಿಂದೆ ಇದ್ದ ಅಭ್ಯರ್ಥಿ ಮಾಡದ ಕೆಲಸವನ್ನು ನಾನು ಆರು ವರ್ಷದಲ್ಲಿ ಮಾಡುತ್ತೇನೆ ನಿಮ್ಮೆಲ್ಲರ ಸಲಹೆ ಸಹಕಾರ ಪಡೆದು ಮೇಲ್ಮನೆಯಲ್ಲಿ ನಿಮ್ಮೆಲ್ಲರ ಪರವಾಗಿ ಹೋರಾಟ ಮಾಡುತ್ತೇನೆ. ನನಗೆ ಬರುವ ವೇತನವನ್ನು ಶಿಕ್ಷಕರ ಕ್ಷೇಮಾಭಿವೃದ್ಧಿಗೆ ಮೀಸಲಿಡುತ್ತೇನೆ ಎಂದರು.
ಈ ವೇಳೆ ಶಿಕ್ಷಕರಾದ ಶಿವರಾಮು, ಬಸವಗೌಡ, ಸುರೇಶ್, ಶಿವಣ್ಣ, ಸೇರಿದಂತೆ ಇತರರು ಹಾಜರಿದ್ದರು