ಮಂಡ್ಯ: ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ಗೆ ಸದ್ದಿಲ್ಲದೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಟ್ರಯಲ್ ಬ್ಲಾಸ್ಟ್ ನಡೆಸಲು ಅನುಮತಿ ಕೋರಿ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದೆ.
ನೀರಾವರಿ ಇಲಾಖೆಯಿಂದ 3 ದಿನಾಂಕ ನಿಗದಿ ಪಡಿಸಿ, ಗಣಿ ಮಾಲೀಕರ ಒತ್ತಡಕ್ಕೆ ಮಣಿದು ಹೈ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಜೂ-24,8 ಇಲ್ಲವೇ ಜುಲೈ 3 ರಂದು ಟ್ರಯಲ್ ಬ್ಲಾಸ್ಟ್ ನಡೆಸಲು ಅನುಮತಿ ಕೋರಿ ಅರ್ಜಿ ಹಾಕಲಾಗಿದೆ. ಆದರೆ ನೀರಾವರಿ ಇಲಾಖೆ ಸಲ್ಲಿಕೆ ಮಾಡಿರೋ ಅನುಮತಿ ವಿರೋಧಿಸಿ ಸಾಮಾಜಿಕ ಹೋರಾಟಗಾರ ರವೀಂದ್ರ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಹೋರಾಟಗಾರನ ತಕರಾರು ಅರ್ಜಿಯನ್ನು ಕೂಡ ಹೈಕೋರ್ಟ್ ಸ್ವೀಕಾರ ಮಾಡಿದೆ.
ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಅಕ್ರಮ ಗಣಿಗಾರಿಕೆ ವಿರುದ್ಧ ತಮ್ಮ ಹೋರಾಟ ನಿರಂತರ ಎಂದು ಹೇಳಿದರು.
ಟ್ರಯಲ್ ಬ್ಲಾಸ್ಟ್ ನಡೆಸಲು ಮುಂದಾದರೆ ರೈತರು ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಕೆ.ಆರ್.ಎಸ್ ಅಣೆಕಟ್ಟು ಪ್ರದೇಶದ 20 ಕಿ.ಮೀ. ವ್ಯಾಪ್ತಿಯಲ್ಲಿ ಈಗಾಗಲೇ ನ್ಯಾಯಾಲಯ ಗಣಿಗಾರಿಕೆಗೆ ನಿಷೇಧ ಹೇರಿದೆ. ನ್ಯಾಯಾಲಯದ ಆದೇಶದಿಂದ ಕಂಗಾಲಾಗಿರುವ ಗಣಿಗಾರಿಕೆ ಮಾಲೀಕರಿಂದ ಟ್ರಯಲ್ ಬ್ಲಾಸ್ಟ್ ವರದಿ ಪಡೆಯಲು ಒತ್ತಡ ಹಾಕಲಾಗುತ್ತಿದೆ.
ಟ್ರಯಲ್ ಬ್ಲಾಸ್ಟ್ ವರದಿ ಪಡೆದು ಆ ಮೂಲಕ ಗಣಿಗಾರಿಕೆ ನಡೆಸಲು ಗಣಿ ಮಾಲೀಕರಿಂದ ಸರ್ಕಾರಕ್ಕೆ ಲಾಭಿ ಮಾಡಲಾಗುತ್ತಿದೆ ಎನ್ನಲಾಗಿದೆ. ಪಾಂಡವಪುರ ತಾಲೂಕಿನಲ್ಲಿ ಬೇಬಿದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ.