ಮಂಡ್ಯ: ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ ಚಿತ್ರ ಸಿನಿಮಾದ ನೂರು ದಿನಗಳ ಶೂಟಿಂಗ್ ಮುಗಿದಿದೆ ಎಂದು ನಿರ್ದೇಶಕ, ನಟ ಇಂದ್ರಜಿತ್ ಲಂಕೇಶ್ ತಿಳಿಸಿದರು.
ಮಂಡ್ಯದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೌರಿ ಚಿತ್ರದಿಂದ ಈಗಾಗಲೇ ಬಿಡುಗಡೆಯಾಗಿರೊ ಹಾಡುಗಳು ಹಿಟ್ ಆಗಿದೆ. ಚಿತ್ರದ ಕಥೆಯೂ ಚೆನ್ನಾಗಿರೋದ್ರಿಂದ ಚಿತ್ರವೂ ಹಿಟ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿನ ಚಿತ್ರಮಂದಿರದ ಕೊರತೆ ಟಿಕೆಟ್ ನ ಬೆಲೆ ಏರಿಕೆ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳ ಕುರಿತು ಇದೇ ವೇಳೆ ಇಂದ್ರಜಿತ್ ಲಂಕೇಶ್ ಮಾತನಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ನಾಯಕ ಸಮರ್ಜಿತ್ ಲಂಕೇಶ್, ನಾಯಕಿ ಸಾನ್ಯಾ ಅಯ್ಯರ್ ಭಾಗಿಯಾಗಿದ್ದರು.