Monday, April 21, 2025
Google search engine

Homeಸ್ಥಳೀಯಕರ್ನಾಟಕ ರಾಜ್ಯ ಆಹಾರ ಆಯೋಗ ಮೈಸೂರಿಗೆ ಭೇಟಿ ಆಹಾರ ಪದಾರ್ಥಗಳ ಪರಿಶೀಲನೆ

ಕರ್ನಾಟಕ ರಾಜ್ಯ ಆಹಾರ ಆಯೋಗ ಮೈಸೂರಿಗೆ ಭೇಟಿ ಆಹಾರ ಪದಾರ್ಥಗಳ ಪರಿಶೀಲನೆ

ಮೈಸೂರು: ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ. ಹೆಚ್.ಕೃಷ್ಣ ನೇತೃತ್ವದಲ್ಲಿ 5 ಜನ ಸದಸ್ಯರಿರುವ ತಂಡವು ಮೈಸೂರಿಗೆ ಮಂಗಳವಾರ ಭೇಟಿ ನೀಡಿ ಚಾಮುಂಡಿ ಬೆಟ್ಟದಲ್ಲಿರುವ ನ್ಯಾಯಬೆಲೆ ಅಂಗಡಿ, ಬಂಡಿ ಪಾಳ್ಯದಲ್ಲಿರುವ ಸಗಟು ಗೋದಾಮು, ಆಲನಹಳ್ಳಿಯಲ್ಲಿರುವ ಅಂಗನವಾಡಿ, ಲಲಿತಾದ್ರಿಪುರದಲ್ಲಿರುವ ಸರ್ಕಾರಿ ಶಾಲೆಗೆ ಮತ್ತು ಕೆ ಎಸ್ ಎಸ್ ಅನಾಥಾಲಯಕ್ಕೆ ಭೇಟಿ ನೀಡಿ ಸರ್ಕಾರದಿಂದ ನೀಡುತ್ತಿರುವ ಆಹಾರ ಪದಾರ್ಥಗಳನ್ನು ವಿತರಣೆ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗಣ್ಣವರ, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿಯಾದ ಸುಜಾತ ಹೊಸಮನಿ, ಜಿಲ್ಲಾ ಮಟ್ಟದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular