ತಾಂಡವಪುರ: ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಯತೀಂದ್ರ ಸಿದ್ದರಾಮಯ್ಯ ಅವರನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಬುದ್ಧನ ವಿಗ್ರಹ ನೀಡುವ ಮೂಲಕ ಮೈಸೂರು ಪೇಟೆ ಬಾರಿ ಗಾತ್ರದ ಹೂವಿನ ಹಾರ ಹಾಕಿ ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯನವರು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲಾ ಪ್ರಾಧಿಕಾರಿಗಳಿಗೂ ಮುಖಂಡರಿಗೂ ಕಾರ್ಯಕರ್ತರಿಗೂ ನಾವು ಆಭಾರಿಯಾಗಿದ್ದೇವೆ ನಾನು ಈ ಮಟ್ಟಕ್ಕೆ ರಾಜಕೀಯವಾಗಿ ಮುಂದೆ ಬರಲು ವರುಣ ವಿಧಾನಸಭಾ ಕ್ಷೇತ್ರದ ಜನತೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಕಾರ್ಯಕರ್ತರು ಕಾರಣ ಅವರ ಆಶೀರ್ವಾದದಿಂದ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಬಾರಿ ಶಾಸಕನಾಗಿ ಆಶ್ರಯ ಸಮಿತಿಯ ಅಧ್ಯಕ್ಷರಾಗಿ ಹಾಗೂ ಈ ಬಾರಿ ವಿಧಾನಸಭೆಯ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ನಿಮ್ಮ ಈ ಪ್ರೀತಿ ಅಭಿಮಾನಕ್ಕೆ ವಿಶ್ವಾಸಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ ಅಲ್ಲದೆ ಮೈಸೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಠದಿಂದ ಸಂಘಟನೆ ಮಾಡಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ದುಡಿಯುವ ಮೂಲಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದು ಯತಿಂದ್ರ ಸಿದ್ರಾಮಯ್ಯನವರು ಭರವಸೆ ನೀಡಿದರು.
ಇದೆ ವೇಳೆ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಡಾಕ್ಟರ್ ಬಿ ಜೆ ವಿಜಯ್ ಕುಮಾರ್ ಮೂಡ ಅಧ್ಯಕ್ಷ ಕೆ ಮರಿಗೌಡ ಕಾಂಗ್ರೆಸ್ ಮಹಿಳೆ ಘಟಕದ ಅಧ್ಯಕ್ಷ ಲತಾ ಸಿದ್ದಶೆಟ್ಟಿ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಲಲಿತಾದ್ರಿಪುರ ಬಸವರಾಜ್ ರವರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಂಗಸ್ವಾಮಿ ರಮೇಶ್ ಮುದ್ದೇಗೌಡ ಕಾಂಗ್ರೆಸ್ ಪಕ್ಷದ ಕಾನೂನು ಘಟಕದ ಎಮ್ ಸಿ ಹುಂಡಿ ಶಿವಪ್ರಸಾದ್ ಉತ್ತನಹಳ್ಳಿ ಶಿವಣ್ಣ ತಾಲೂಕು ಕುರುಸಂದ್ರ ಅಧ್ಯಕ್ಷ ಕೆಂಪಣ್ಣ ಹಳ್ಳಿ ದಿಡ್ಡಿ ಆರ್ ಮಹದೇವ್ ಕುರಿಹುಂಡಿ ರಾಜು ಕಾಂಗ್ರೆಸ್ ಪಕ್ಷದ ದಲಿತ ಮುಖಂಡ ಚಿನ್ನಂಬಳ್ಳಿ ಸಿಆರ್ ಮಹದೇವ್ ಗುರುಪಾದ ಹಳಗಂಚಿಪುರ ಮಂಜು ಮಹಾದೇವಸ್ವಾಮಿ ಕೆಎಸ್ ಹುಂಡಿ ನಂಜಯ್ಯ ಚಿನ್ನದ ಗುಡಿಗುಂಡಿ ಬಸವೇಗೌಡ ಹುಳಿಮಾವು ಪರಶಿವಮೂರ್ತಿ ಹದಿ ನಾರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಅಭಿ ಅಭಿಷೇಕ್ ಗುರು ಮಲ್ಲಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರುಗಳು ಹಾಜರಿದ್ದರು.