Tuesday, April 22, 2025
Google search engine

Homeಅಪರಾಧಕಾನೂನುಒಂದೇ ದಿನ 600 ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ

ಒಂದೇ ದಿನ 600 ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ

ಬೆಂಗಳೂರು: ಹೈಕೋರ್ಟ್‌ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರ ಒಂದೇ ದಿನದ ಕಲಾಪದಲ್ಲಿ ಬರೋಬ್ಬರಿ 600 ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ.

ಆರಂಭದಲ್ಲೇ ಅಷ್ಟೂ ವಿಚಾರಣೆ ಮಂಗಳವಾರ ನಡೆಸಲಾಗುತ್ತದೆ ಎಂದು ನಿಗದಿ ಪಡಿಸಲಾಗಿತ್ತು. ಅದರಂತೆಯೇ ಅಷ್ಟು ಅರ್ಜಿಗಳ ವಿಚಾರಣೆಯನ್ನು ಅಪರಾಹ್ನ 3.56ರ ವೇಳೆಗೆ ಪೂರ್ಣಗೊಳಿಸಿ ಕಲಾಪ ಮುಗಿಸಿದರು.

ನಿಗದಿಯಾಗಿದ್ದ 600 ಅರ್ಜಿಗಳ ಪೈಕಿ 180 ಅರ್ಜಿಗಳ ಸಂಬಂಧ ಮಧ್ಯಾಂತರ ಆದೇಶ ನೀಡಿದ್ದಾರೆ.

87 ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿ ವಿಲೇವಾರಿ ಮಾಡಿದ್ದಾರೆ. ನ್ಯಾ| ನಾಗಪ್ರಸನ್ನ ಅವರು ಕಳೆದ ಮಾ. 22ರಂದು ಒಂದೇ ದಿನದ ಕಲಾಪದದಲ್ಲಿ 801 ಅರ್ಜಿಗಳನ್ನು ವಿಚಾರಣೆ ನಡೆಸಿದ್ದರು. ಅವುಗಳ ಪೈಕಿ 36 ಅರ್ಜಿಗಳ ಸಂಬಂಧ ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿದರು. ಉಳಿದಂತೆ ಸುಮಾರು 572 ಅರ್ಜಿಗಳನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದರು.

ಇತ್ಯರ್ಥವಾದ ಪ್ರಕರಣಗಳಲ್ಲಿ 544 ಅರ್ಜಿಗಳು ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ್ದಾಗಿದ್ದವು.

RELATED ARTICLES
- Advertisment -
Google search engine

Most Popular